Breaking News
Home / ಸಿನೆಮಾ / ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50ರಷ್ಟು ಪ್ರೇಕ್ಷಕರ ನಿರ್ಬಂಧ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50ರಷ್ಟು ಪ್ರೇಕ್ಷಕರ ನಿರ್ಬಂಧ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

Spread the love

ಬೆಂಗಳೂರು : ಖಾಸಗಿ ಸಮಾರಂಭಕ್ಕೆ, ಕಾರ್ಯಗಾರಕ್ಕೆ, ಸಾರ್ವಜನಿಕ ಪ್ರಯಾಣಕ್ಕೆ, ಮಾರ್ಕೆಟ್, ಪ್ರವಾಸಿ ಸ್ಥಳಗಳಲ್ಲಿ ಜನಸಾಮಾನ್ಯರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆದ್ರೇ ಚಿತ್ರಮಂದಿರದಲ್ಲಿ ಚಿತ್ರವೀಕ್ಷಿಸಲು ಏಕೆ 50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶದ ನಿರ್ಬಂಧ ಎಂಬುದಾಗಿ ನಟ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಈ ಕುರಿತಂತೆ ನಟ ಧೃವ ಸರ್ಜಾ ಅವರ ಬೆಂಬಲಕ್ಕೆ ನಿಂತು ಟ್ವಿಟ್ ಮಾಡಿರುವಂತ ನಟ ಪುನಿತ್ ರಾಜ್ ಕುಮಾರ್, ಖಾಸಗಿ ಸಮಾರಂಭಗಳು, ಪೂಜಾ ಸ್ಥಳಗಳು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆ, ಪ್ರವಾಸಿ ತಾಣಗಳು ಎಂದಿನಂತೆ ಕಾರ್ಯಾಚರಿಸಲು ಅವಕಾಶ ನೀಡಿದಾಗ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50ರಷ್ಟು ಪ್ರೇಕ್ಷಕರ ನಿರ್ಬಂಧ ಎಂಬುದಾಗಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಅಂದಹಾಗೇ, ನಿನ್ನೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕೊರೋನಾ ಮಾರ್ಗಸೂಚಿ ಅನುಸಾರವಾಗಿ, ಪರಿಷ್ಕೃತ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿದೆ. ಆದ್ರೇ ರಾಜ್ಯ ಸರ್ಕಾರ ಕೊರೋನಾ ಎರಡನೆ ಅಲೆಯಿಂದಾಗಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಭರ್ತಿಗೆ ಮಾತ್ರವೇ ಅವಕಾಶ ನೀಡಿರೋದಕ್ಕೆ, ಸ್ಯಾಂಡಲ್ ವುಡ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಧೃವ ಸರ್ಜಾ ಎತ್ತಿದ್ದಂತ ರಾಜ್ಯಸರ್ಕಾರದ ವಿರುದ್ಧದ ಧ್ವನಿಗೆ, ಕನ್ನಡ ಚಿತ್ರರಂಗದ ಗಣ್ಯರು ಸಾಥ್ ನೀಡಿದ್ದಾರೆ.


Spread the love

About Laxminews 24x7

Check Also

ಶಿವಣ್ಣ ಪುತ್ರಿ ನಿವೇದಿತಾ ರಾಜ್‌ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ

Spread the love ವರನಟ, ಕನ್ನಡ ಸಿನಿ ಪ್ರಿಯರ ಆರಾಧ್ಯದೈವ ಡಾ.ರಾಜ್‌ಕುಮಾರ್‌ ಕುಟುಂಬದಿಂದ ಮತ್ತೊಬ್ಬ ಸದಸ್ಯರು ಸಿನಿಮಾ ಕ್ಷೇತ್ರಕ್ಕೆ ಭರ್ಜರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ