Breaking News

ನಮ್ಮೂರಲ್ಲಿನ ಬಾರ್ ಮುಚ್ಚಿಸಿ: ಪ್ರತಿಭಟಿಸಿದ ಮಹಿಳೆಯರು

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ‌ತಾಲೂಕಿನ ಖೋದಾನಪುರ ಗ್ರಾಮದಲ್ಲಿ ಮೊದಲು ದಾಬಾ ಅಂತ ಶುರು ಮಾಡಿ ನಂತರ ಅಲ್ಲಿಯೇ ಅನಧಿಕೃತ ಬಾರ್ ಶುರು ಮಾಡಲಾಗಿದೆ. ಇದನ್ನು ತಕ್ಷಣ ಬಂದ್ ಮಾಡಬೇಕು ಎಂದು ಪ್ರತಿಭಟನೆ ನಡೆಸಲಾಯಿತು.

ಇಂದು ಬೆಳಗಾವಿ ನಗರದ ಅಬಕಾರಿ ಕಚೇರಿ ಮುಂದೆ ಕರ್ನಾಟಕ ಬಹುಜನ ಚಳುವಳಿ ಸಂಘದ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.

ಶ್ರೀ ಸಾಯಿ ಸ್ಪೋರ್ಟ್ಸ್ ಕ್ಲಬ್ ಎನ್ನುವ ಹೆಸರಿನಲ್ಲಿ ಬಾರ್ ನಡೆಸಲಾಗುತ್ತಿದೆ. ಬಾರ್‌ನಿಂದ ಯುವಕರು ಹಾಳಾಗುತ್ತಿದ್ದಾರೆ. ಇದರಿಂದ ಸಾಕಷ್ಟು ಮನೆತನಗಳು ಹಾಳಾಗಿವೆ.  ಈ ಮಾರ್ಗವಾಗಿ ನಡೆದು ಬರುವ ಹೆಣ್ಣು ಮಕ್ಕಳು, ವಿದ್ಯಾರ್ಥಿಗಳಿಗೆ ಮತ್ತು ಹೊಲ ಗದ್ದೆಗಳಿಗೆ ಹೋಗುವ ಮಹಿಳೆಯರಿಗೆ ಕುಡುಕರಿಂದ ಹಿಂಸೆ ಉಂಟಾಗುತ್ತಿದೆ. ಸುತ್ತಮುತ್ತಲಿನ ಜಮೀನುಗಳಲ್ಲಿ ಬಿಯರ್ ಹಾಗೂ ಮದ್ಯಬಾಟಲ್ ಗಳಿಂದ ದನಕರು ಹಾಗೂ ರೈತರಿಗೆ ಉಳುಮೆ ಮಾಡಲು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ.

ಹಾಗಾಗಿ 7 ದಿನಗಳೊಳಗಾಗಿ  ಕ್ರಮ ಕೈಗೊಳಬೇಕು. ಒಂದು ವೇಳೆ ತಪ್ಪಿದಲ್ಲಿ ಗ್ರಾಮಸ್ಥರು, ಮಕ್ಕಳು ಗ್ರಾಮದ ಮಹಿಳೆಯರು ಸೇರಿಕೊಂಡು ಶ್ರೀ ಸಾಯಿ ಸ್ಪೋರ್ಟ್ಸ್ ಕ್ಲಬ್ ಮುಂದೆ ಹೋರಾಟ್ ಮಾಡುತ್ತೇವೆ ಎಂದು ಮಹಿಳೆರು ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ