Breaking News

ಒಂದೆಡೆ ಡ್ಯಾಂಗಳಿಗೆ ಜೀವಕಳೆ.. ಇತ್ತ ಕೈಕೊಟ್ಟ ಮುಂಗಾರಿನಿಂದ ಕಾರಂಜಾ ಜಲಾಶಯ ಬಹುತೇಕ ಖಾಲಿ

Spread the love

ಬೀದರ್: ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ರೈತರ ಜೀವನಾಡಿ ಕಾರಂಜಾ ಜಲಾಶಯದ  ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮಳೆ ಕೊರತೆಯಿಂದಾಗಿ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿಯ ಕಾರಂಜಾ ಡ್ಯಾಂ ಒಳಹರಿವು ಶೂನ್ಯವಾಗಿದೆ. 7.65 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಾರಂಜಾ ಜಲಾಶಯದಲ್ಲಿ ಸದ್ಯ 4.5 ಟಿಎಂಸಿ ನೀರು ಮಾತ್ರ ಇದ್ದು, ಬಹುತೇಕ 1 ಟಿಎಂಸಿ ನೀರು ಡೆಡ್ ಸ್ಟೋರೆಜ್ ಇದೆ‌. ಸದ್ಯ 3 ಟಿಎಂಸಿ ನೀರು ಮಾತ್ರ ಇದ್ದು, ಈ ತಿಂಗಳು ಮಳೆ ಬಾರದೆ ಇದ್ರೆ ಡ್ಯಾಂ ಸಂಪೂರ್ಣ ಬರಿದಾಗಲಿದೆ. 

ಸದ್ಯ ಜಿಲ್ಲೆಯ ಜನರಿಗೆ ಕುಡಿಯುವುದಕ್ಕಷ್ಟೇ ನೀರು ಬರುತ್ತಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ ರೈತರ ಬೆಳೆಗಳಿಗೆಲ್ಲ ನೀರೂ ಇಲ್ಲದೆ ಒಣಗುತ್ತಿವೆ. ಸರ್ಕಾರದ ಆದೇಶದಂತೆ ಡ್ಯಾಂನಿಂದ ಕಾಲುವೆಗೆ ನೀರು ಬಿಡುವುದು ಸಂಪೂರ್ಣ ಸ್ಥಗಿತವಾಗಿದ್ದು, ಜಲಾಶಯದ ನೀರನ್ನು ನಂಬಿಕೊಂಡು ‌ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಭಾಲ್ಕಿ ತಾಲೂಕಿನ 29 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳಿಗೆ ನೀರು ಒದಗಿಸುತ್ತಿದ್ದ ಕಾರಂಜಾ ಡ್ಯಾಂ ಸದ್ಯ ಬಂದ್‌ ಆಗಿದೆ.

ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗದ ಹಿನ್ನೆಲೆ ಅಧಿಕಾರಿಗಳು ಬೆಳೆಗಳಿಗೆ ನೀರು ಬಿಡದೇ ಬಂದ್ ಮಾಡಿದ್ದಾರೆ. ಬೀದರ್ ನಗರ, ಚಿಟಗುಪ್ಪಾ, ಹುಮ್ನಾಬಾದ್ ಪಟ್ಟಣ ಮತ್ತು ಗ್ರಾಮೀಣ ಭಾಗಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತದೆ. ಭವಿಷ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಬೆಳೆಗಳಿಗೆ ನೀಡು ಬಿಡುವುದು ಸ್ಥಗಿತವಾಗಿದೆ.


Spread the love

About Laxminews 24x7

Check Also

ತೆಲಂಗಾಣದಲ್ಲಿ ಪೋಕ್ಸೋ ಆರೋಪಿಯಿಂದ ಮಾರಣಹೋಮ – ಪತ್ನಿ, ಮಕ್ಕಳು, ಸಂತ್ರಸ್ತೆ ಸೇರಿ 6 ಜನರ ಬರ್ಬರ ಹತ್ಯೆ

Spread the loveಹೈದರಾಬಾದ್: ಪೋಕ್ಸೋ ಕೇಸಲ್ಲಿ ಜಾಮೀನು ಪಡೆದಿದ್ದ ಆರೋಪಿಯೊಬ್ಬ ಹೆಂಡತಿ, ಇಬ್ಬರು ಮಕ್ಕಳು ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ