Breaking News

ನಾವು ಪ್ರತಿಷ್ಠೆಗೆ ಬಿದ್ದಿಲ್ಲ, ಮಾತುಕತೆಗೆ ಬನ್ನಿ – ಸಿಜೆಪಿ ಜೊತೆ ಸಭೆಗೆ ಕೇಂದ್ರದಿಂದ 4ನೇ ಆಹ್ವಾನ

Spread the love

ನವದೆಹಲಿ: ವಿದ್ಯಾರ್ಥಿ ನಾಯಕರೊಂದಿಗೆ ಚರ್ಚಿಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಮಧ್ಯಾಹ್ನದಿಂದ ಸಿಜೆಪಿ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಸರ್ಕಾರವು ಈಗಾಗಲೇ ನಾಲ್ಕು ಅಧಿಕೃತ ಪ್ರಸ್ತಾಪಗಳನ್ನು ಕಳುಹಿಸಿದೆ. ಇದು ನಮ್ಮ ಯುವ ಸ್ನೇಹಿತರಿಗೆ ನೀಡುತ್ತಿರುವ ಮುಕ್ತ ಆಹ್ವಾನ. ನಿಮ್ಮ ಅನುಕೂಲಕ್ಕೆ ತಕ್ಕಂತೆ, ಯಾವುದೇ ಸಮಯದಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಕಚೇರಿ ಅಥವಾ ನಿವಾಸದಲ್ಲೇ ಈ ಮಾತುಕತೆಗಳು ನಡೆಯಬಹುದು. ನಾವು ಯಾವುದೇ ಪ್ರತಿಷ್ಠೆಗೆ ಬಿದ್ದಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದರು.

ಜೆ.ಪಿ. ನಡ್ಡಾ ಮತ್ತು ನಾನು ಖುದ್ದು ಚರ್ಚೆಗೆ ಉಪಸ್ಥಿತರಿರುತ್ತೇವೆ. ನಿರಂತರವಾಗಿ ಮಾತುಕತೆ ನಡೆಸುವ ಮೂಲಕವೇ ನಾವು ಹಂತ-ಹಂತವಾಗಿ ಪರಿಹಾರದತ್ತ ಸಾಗಬಹುದು. ಇದು ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಸರ್ಕಾರ ಕೈಗೊಳ್ಳುತ್ತಿರುವ ಸಾಲು ಸಾಲು ಕ್ರಮಗಳ ಭಾಗವಾಗಿದೆ ಎಂದರು.

ನಾವೆಲ್ಲರೂ ಅತ್ಯಂತ ವಿನಮ್ರತೆಯಿಂದ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ಮಾತುಕತೆಗೆ ಬನ್ನಿ ಎಂದು ಸಚಿವರು ಪ್ರತಿಭಟನಾ ನಿರತ ಯುವಕರಿಗೆ ಆಹ್ವಾನ ನೀಡಿದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ