Breaking News
Home / ಅಂತರಾಷ್ಟ್ರೀಯ / ವುಹಾನ್ ಲ್ಯಾಬ್‍ನಿಂದ ವೈರಸ್ ಹೊರಬಂದಿದ್ದು ಹೇಗೆ..? : ತನಿಖೆಗೆ ಟ್ರಂಪ್ ಚಿಂತನೆ

ವುಹಾನ್ ಲ್ಯಾಬ್‍ನಿಂದ ವೈರಸ್ ಹೊರಬಂದಿದ್ದು ಹೇಗೆ..? : ತನಿಖೆಗೆ ಟ್ರಂಪ್ ಚಿಂತನೆ

Spread the love

ವಾಷಿಂಗ್ಟನ್, ಏ.18-ವಿಶ್ವವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ವೈರಸ್‍ನ ಉಗಮ ಬಿಂದು ಚೀನಾದ ವುಹಾನ ನಗರಿಯ ಪ್ರಯೋಗಾಲಯದಿಂದ ಡೆಡ್ಲಿ ವೈರಸ್ ತಪ್ಪಿಸಿಕೊಂಡಿರುವ ವರದಿ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕು ಮತ್ತು ಸಾವು ನೋವಿನ ಬಗ್ಗೆ ಸಾಕಷ್ಟು ಸುಳ್ಳುಗಳನ್ನು ಹೇಳಿ ಜಗತ್ತಿನ ದಿಕ್ಕು ತಪ್ಪಿಸುತ್ತಿರುವ ಚೀನಾದ ಕರ್ಮಕಾಂಡಗಳು ಒಂದೊಂದೇ ಬಯಲಿಗೆ ಬರುತ್ತಿದ್ದು, ಆ ದೇಶಕ್ಕೆ ತಕ್ಕ ಪಾಠ ಕಲಿಸಲು ಟ್ರಂಪ್ ಸಿದ್ಧತೆಯಲ್ಲಿದ್ದಾರೆ. ವುಹಾನ್ ಲ್ಯಾಬ್‍ನಿಂದ ಕಿಲ್ಲರ್ ವೈರಸ್ ಪರಾರಿಯಾಗಿ ಸೋಂಕು ವ್ಯಾಪಕಗೊಂಡ ಅನೇಕ ದೇಶಗಳಿಗೆ ಹಬ್ಬಿ ಅಪಾರ ಸಾವು-ಸೋವುಗಳಿಗೆ ಕಾರಣವಾಗಿದೆ ಎಂಬ ವರದಿಯೊಂದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಾಷಿಂಗ್ಟನ್‍ನ ಶ್ವೇತಭವನದಲ್ಲಿ ದೈನಂದಿನ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಅನೇಕ ಜನರು ಸಹ ಈ ಬಗ್ಗೆ ಚಿಂತಿತರಾಗಿದ್ದಾರೆ. ಇದೊಂದು ಗಂಭೀರ ವಿಷಯ ಎಂದರು.

ಕೆಲವು ಜನರು ಬಾವಲಿಯಿಂದ ಸೋಂಕು ಹಬ್ಬಿದೆ ಎಂದು ಹೇಳುತ್ತಿದ್ದಾರೆ. ಆದರೆ ಆ ಪ್ರದೇಶದಲ್ಲಿ ಬಾವಲಿ ಇಲ್ಲ. ಆ ಸಸ್ತನಿ ವುಹಾನ್ ನಗರಿಂದ ಬಹು ದೂರದಲ್ಲಿದೆ. ಈ ಬಗ್ಗೆ ವರದಿಗಳಿವೆ. ಇವುಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸುತ್ತೇವೆ ಎಂದು ಟ್ರಂಪ್ ಹೇಳಿದರು.

ದಿನಕ್ಕೊಂದು ಸುಳ್ಳು ಹೇಳುತ್ತಿರುವ ಚೀನಾದಲ್ಲಿ ಕೊರೊನಾ ಸೋಂಕಿನಿಂದ 2.10 ಕೋಟಿ ಮಂದಿ ಬಲಿಯಾಗಿದ್ಧಾರೆ ಎಂಬ ಆಘಾತಕಾರಿ ಸಂಗತಿಯನ್ನು ಅಮೆರಿಕ ಗುಪ್ತಚರ ಇಲಾಖೆ ಬಯಲುಗೊಳಿಸಿದ ನಂತರ ಬೀಜಿಂಗ್‍ನ ಕರ್ಮಕಾಂಡಗಳು ಒಂದೊಂದೆ ಬಯಲಾಗುತ್ತಿವೆ.


Spread the love

About Laxminews 24x7

Check Also

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

Spread the loveಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ