Breaking News

ಅಕ್ರಮ ಬಡಾವಣೆ-ಕಟ್ಟಡಗಳ ಸಕ್ರಮಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ

Spread the love

ಬೆಂಗಳೂರು : ಅಕ್ರಮ ಬಡಾವಣೆ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಶುಕ್ರವಾರ ಕೈಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗೆ ರಾಜ್ಯ ಸರ್ಕಾರ ಕೊನೆಗೂ ಮುಕ್ತಿ ಕಾಣಿಸಿದೆ.

ಅನಧಿಕೃತ ಬಡಾವಣೆ ಹಾಗೂ ಕಟ್ಟಡಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲ ಸೌಕರ್ಯ ಒದಗಿಸಿದೆ. ಆದರೂ ಯಾವುದೇ ತೆರಿಗೆ ರಾಜ್ಯದ ಬೊಕ್ಕಸಕ್ಕೆ ಬರುತ್ತಿಲ್ಲ.ರಾಜ್ಯದ ಆದಾಯ ಹೆಚ್ಚಿಸಲು ಇಂತಹ ನಿರ್ಧಾರಕ್ಕೆ ಬರಲಾಗಿದೆ

ಎಲ್ಲ ಅಕ್ರಮ ಕಟ್ಟಡಗಳನ್ನೂ ಸಕ್ರಮಗೊಳಿಸುವ ಮೂಲಕ ಸಂಬಂಧಿಸಿದ ಸ್ಥಳೀಯ ಆಡಳಿತಗಳಿಗೆ ಹೆಚ್ಚಿನ ಆದಾಯ ಕ್ರೋಡೀಕರಿಸಲು ಮತ್ತು ಸಾರ್ವಜನಿಕರಿಗೆ ಈ ಸಮಸ್ಯೆಯಿಂದ ಮುಕ್ತಿ ದೊರಕಿಸಲು ಸಚಿವ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಅನಧಿಕೃತ‌ ಬಡಾವಣೆಗಳು ಕಟ್ಟಡಗಳಿಗೆ ಕುಡಿಯುವ‌ ನೀರು, ರಸ್ತೆ,‌ ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದ್ದರೂ ಸರ್ಕಾರಕ್ಕೆ ಇವುಗಳಿಂದ ಯಾವುದೇ‌ ತೆರಿಗೆ ಬರುತ್ತಿಲ್ಲವೆನ್ನುವುದನ್ನು ಪರಿಗಣಿಸಿರುವ ಸರ್ಕಾರ, ಇಂತಹ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ ಸರ್ಕಾರಕ್ಕೆ ಆದಾಯ ತರುವ ಉದ್ದೇಶವಿದೆ ಎಂದು‌ ಮುಖ್ಯಮಂತ್ರಿ‌ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಒಂದು ವಾರದೊಳಗೆ ಅನಧಿಕೃತ ಆಸ್ತಿಗಳನ್ನು ಸಕ್ರಮಗೊಳಿಸುವ ಹೊಸ ಮಾರ್ಗಸೂಚಿಗಳನ್ನು ನಗರಾಭಿವೃದ್ಧಿ ಇಲಾಖೆ ಕೊಡಲಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ಅನಧಿಕೃತ ಆಸ್ತಿಗಳ ಸಕ್ರಮಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪುನರ್ ರಚಿಸಲು ತೀರ್ಮಾನಿಸಲಾಗಿದೆ. ಇತರ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಅಧ್ಯಯನ ನಡೆಸಲು ಸಹ ತೀರ್ಮಾನಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯು ಒಂದು ವಾರದೊಳಗೆ ಹೊಸ ಮಾರ್ಗಸೂಚಿಯನ್ನು ಸಿದ್ಧ ಪಡಿಸಲಿದೆ ಎಂದು ಹೇಳಿದರು.

ಹಳೆಯ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರವೊಂದರಲ್ಲೇ 2.93ಲಕ್ಷ ಅನಧಿಕೃತ ಕಟ್ಟಡಗಳಿವೆ, ಇಡೀ ರಾಜ್ಯದಲ್ಲಿ ಇದರ ಸಂಖ್ಯೆ 35 ಲಕ್ಷ ಇದೆ.ಹಳೆಯ ಸಮೀಕ್ಷೆ ಆಗಿರುವುದರಿಂದ ಇದರ ಸಂಖ್ಯೆ ಈಗ ದ್ವಿಗುಣಗೊಂಡಿರಬಹುದು.

ಬೆಂಗಳೂರು ಹೊರತು ಪಡಿಸಿ ಇತರೆಡೆಗಳಲ್ಲಿ ಅನಧಿಕೃತ ಕಟ್ಟಡಗಳಿಗೆ ದ್ವಿಗುಣ ತೆರಿಗೆ ವಿಧಿಸಲಾಗುತ್ತಿದೆ. ಕಾನೂನಿನಡಿ ಶೇ. 50ರವರೆಗಿನ ನಿರ್ಮಾಣ ನಿಯಮ ಉಲ್ಲಂಘನೆಗೆ ಶೇ. 6ರವರೆಗೆ ಹಾಗೂ ಅದಕ್ಕಿಂತ ಹೆಚ್ಚಿನ ಉಲ್ಲಂಘನೆಗೆ ಮಾರುಕಟ್ಟೆ ಮೌಲ್ಯದ ಶೇ. 25ರ ವರೆಗೆ ದಂಡ ವಿಧಿಸಲು ಅವಕಾಶವಿದೆ.

ಹೀಗಾಗಿ ಇಂತಹ ಅಕ್ರಮ‌ ಕಟ್ಟಡಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಭೆ ನಡೆಸಿದ್ದೇವೆ ಎಂದರು. ರಾಜ್ಯದೆಲ್ಲೆಡೆ ಅಕ್ರಮ-ಸಕ್ರಮ ಯೋಜನೆ ಜಾರಿಗೆ ನಿರ್ಧಾರ- ಸಿಎಂ ಯಡಿಯೂರಪ್ಪ ಅನಧಿಕೃತವಾಗಿ ಕಟ್ಟಡಗಳನ್ನು ಕಟ್ಟಿ, ಸರಕಾರದಿಂದ ಸವಲತ್ತು ಪಡೆಯುತ್ತಿದ್ದರೂ ತೆರಿಗೆ ವಂಚಿಸುತ್ತಿರುವವರಿಗೆ ಇನ್ಮುಂದೆ ಸಕ್ರಮದಡಿ ನೋಂದಣಿಯಾಗಿ ತೆರಿಗೆ ಕಟ್ಟಲೇಬೇಕಿದೆ.

ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು, ವಾರದ ಒಳಗಾಗಿ ಅಕ್ರಮ ಕಟ್ಟಡಗಳನ್ನು ಅಕ್ರಮ-ಸಕ್ರಮದಡಿ ನೋಂದಣಿ ಮಾಡುವಂತೆ ಸೂಚಿಸಿದ್ದಾರೆ. ಈ ಮೂಲಕ ಬೊಕ್ಕಸ ತುಂಬಿಸುವ ಕೆಲಸಕ್ಕೆ ಸಿಎಂ ಮುಂದಾಗಿದ್ದಾರೆ.

ಹಲವಾರು ಅನಧಿಕೃತ ಬಡಾವಣೆಗಳು ಮತ್ತು ಕಟ್ಟಡಗಳಿಗೆ ಸರ್ಕಾರ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿದೆ. ಆದರೆ ಸರ್ಕಾರಕ್ಕೆ ಯಾವುದೇ ತೆರಿಗೆ ಬರುತ್ತಿಲ್ಲ. ಆದ್ದರಿಂದ ಅನಧಿಕೃತ ಕಟ್ಟಡ ನಿರ್ಮಾಣವನ್ನು ಸಕ್ರಮಗೊಳಿಸುವುದರೊಂದಿಗೆ ರಾಜ್ಯ ಸರ್ಕಾರಕ್ಕೆ ರಾಜಸ್ವ ಸಂಗ್ರಹವೂ ಮಾಡಲು ಉದ್ದೇಶಿಸಿದೆ ಎಂದು ಸಚಿವರು ಸಭೆ ಬಳಿಕ ತಿಳಿಸಿದರು.


Spread the love

About Laxminews 24x7

Check Also

ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳ ಜಲಸಮಾಧಿ

Spread the loveಮೈಸೂರು : ನೀರಿನಲ್ಲಿ ಮುಳುಗಿ ತಾತ ಮತ್ತು ಮೊಮ್ಮಕ್ಕಳು ಜಲಸಮಾಧಿಯಾಗಿರುವ ಘಟನೆ ತಿ. ನರಸೀಪುರ ಪಟ್ಟಣದಲ್ಲಿ ನಡೆದಿದೆ. ತಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ