Breaking News

ಕೂಲಿಕಾರರಿಗೆ ವಿಬಿ-ಜಿ ರಾಮ್‌ಜಿ ಕೆಲಸ ಖಾತ್ರಿ

Spread the love

ಬೆಳಗಾವಿ :ಉದ್ಯೋಗದ ಬೇಡಿಕೆ ಸಲ್ಲಿಸುವ ಕೂಲಿಕಾರರಿಗೆ ವಿಳಂಬ ಮಾಡದೆ ಕೆಲಸ ಕಲ್ಪಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷೃ ಆಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸುಚಿಸಿದರು.
ಬೆಳಗಾವಿ ತಾಲೂಕಿನ ನೀಲಜಿ, ಹೊನಗಾ ಗ್ರಾಪಂ ವ್ಯಾಪ್ತಿಯಲ್ಲಿ  ವಿಕ್ಷಿತ್ ಭಾರತ್ ಗ್ಯಾರಂಟಿಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ( ವಿಬಿ-ಜಿ ರಾಮ್‌ಜಿ) ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ,ಕೂಲಿಕಾರರ ಹಾಜರಾತಿ,  ಕಾಯಕ ಬಂಧುಗಳ ಮೊಬೈಲ್‌ನಲ್ಲಿ ಎನ್‌ಎಂಎಂಎಸ್ ಹಾಜರಾತಿ ದಾಖಲಿಸುವ ಪ್ರಕ್ರಿಯೆಯನ್ನೂ ಪರಿಶೀಲಿಸಿದಬಳಿಕ ಮಾತನಾಡಿ,ವಿಬಿ-ಜಿ ರಾಮ್ ಜಿ ಹಾಗೂ ಇ-ಸ್ವತ್ತು ಕುರಿತು ಅಧಿಕಾರಿಗಳು ಜನರಿಗೆ ತಪ್ಪು ಮಾಹಿತಿ ನೀಡಬಾರದು. ಸರ್ಕಾರದ ನಿರ್ದೇಶನದಂತೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಈಬಾರಿ ಮುಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಕೂಲಿ ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಉದ್ಯೋಗ ಕೇಳಿಕೊಂಡು ಬರುವವರಿಗೆ ಕಡ್ಡಾಯವಾಗಿ  ವಿಬಿ-ಜಿ ರಾಮ್‌ಜಿ ಅಡಿಯಲ್ಲಿ  ಉದ್ಯೋಗ ಕಲ್ಪಿಸಿಕೊಡಬೇಕು. ಉದ್ಯೋಗಕ್ಕಾಗಿ ಗ್ರಾಪಂ ಕಚೇರಿಗಳಿಗೆ ಅಲೆದಾಡಿಸುವುದು, ಹಾಜರಾತಿಯಲ್ಲಿ ವಿಳಂಬ ಮಾಡಿದರೆ ತಪ್ಪಿತಸ್ಥರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ  ನೀಡಿದರು.
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಯೋಜನೆಯಾಗಿ ಜಿ-ಸ್ವತ್ತು ಕುರಿತು ಸರಿಯಾದ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಯಾವುದೇ ಆಸ್ತಿಗಳ ದಾಖಲೆಗಳ ಸಮಸ್ಯೆ ಇದ್ದರೆ ಖುದ್ದಾಗಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಬೇಕು. ದೂರುಗಳಿಗೆ ನಿರ್ಲಕ್ಷೃ ಮಾಡುವುದು ಕಂಡು ಗ್ರಾಪಂ ಪಿಡಿಒ, ಕಾರ್ಯದರ್ಶಿ ವಿರುದ್ಧ ತನಿಖೆಯ ಜತೆಗೆ ಕ್ರಮ ಕೈಗೊಳ್ಳಲಾಗುವುದು ಎಂದ
ಇದೇ  ಹೊನಗಾ ಗ್ರಾಮ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ಸ್ಥಳೀಯ ಕೂಲಿಕಾರರಿಂದ ಯೋಜನೆಯಡಿ ಕೆಲಸ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಖುದ್ದಾಗಿ ದಾಖಲೆಗಳ ನಿರ್ವಹಣೆ ಪರಿಶೀಲನೆ ನಡೆಸಿದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ತಾಪಂ ಸಹಾಯಕ ನಿರ್ದೇಶಕ ಬಸವಂತಪ್ಪ ಕಡೇಮನಿ, ಜಿಪಂ ಎಡಿಪಿಸಿ ಬಸವರಾಜ ಎನ್ ಇತರರಿದ್ದರು.

Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ