Breaking News
Home / ಅಂತರಾಷ್ಟ್ರೀಯ / ಸರ್ಕಾರ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕಿದೆ. ಆದ್ದರಿಂದಲೇ ವರ್ಕಿಂಗ್​​ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

ಸರ್ಕಾರ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕಿದೆ. ಆದ್ದರಿಂದಲೇ ವರ್ಕಿಂಗ್​​ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.

Spread the love

ವಾಷಿಂಗ್ಟನ್: ತೀವ್ರ ಕೋವಿಡ್​​-19 ಸೋಂಕಿನಿಂದ ತತ್ತರಿಸಿರುವ ಅಮೆರಿಕದಲ್ಲಿ ಈಗ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಹೀಗಾಗಿ ಅಮೆರಿಕ ಸರ್ಕಾರ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕಿದೆ. ಆದ್ದರಿಂದಲೇ ವರ್ಕಿಂಗ್​​ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಈ ವರ್ಷದ ಕೊನೆವರೆಗೂ ವರ್ಕಿಂಗ್​​ ವೀಸಾಗಳ ಮೇಲೆ ನಿರ್ಬಂಧ ಹೇರಿದ್ದಾರೆ. ತಮ್ಮ ದೇಶಕ್ಕೆ ಬರದಂತೆ ವಿದೇಶೀಯರಿಗೆ ಎಚ್- 1ಬಿ ವೀಸಾ ಸೇರಿದಂತೆ ತಾತ್ಕಾಲಿಕ ಉದ್ಯೋಗ ವೀಸಾಗಳ ಮೇಲೆ ಈ ವರ್ಷಾಂತ್ಯದವರೆಗೂ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ಧಾರೆ. ಈ ಆದೇಶಕ್ಕೆ ಸೋಮವಾರ ಸಹಿ ಹಾಕಿರುವ ಟ್ರಂಪ್​​​, ಚ್-1ಬಿ ವೀಸಾ, ಹೆಚ್-2ಬಿ ವೀಸಾ ಮತ್ತು ಎಲ್-1 ವೀಸಾಗಳ ಮೇಲೆ ವಿವಿಧ ನಿರ್ಬಂಧ ಹೇರಿದ್ಧಾರೆ. ಈ ಮೂಲಕ ಅಮೆರಿಕಾಗೆ ಬರುವ ವಲಸಿಗರ ಪ್ರವೇಶಕ್ಕೆ ಬ್ರೇಕ್​ ಹಾಕಿದ್ದಾರೆ. ಇನ್ನು, ಟ್ರಂಪ್​​ ನಿರ್ಬಂಧ ಆದೇಶದಿಂದ ಭಾರತ ಸೇರಿದಂತೆ ವಿವಿಧ ದೇಶಗಳ ಟೆಕ್ಕಿಗಳಿಗೆ ತೊಡಕಾಗಿದೆ. ಜತೆಗೆ ಗೂಗಲ್, ಆಪಲ್, ಫೇಸ್ಬುಕ್, ಮೈಕ್ರೋಸಾಫ್ಟ್​ನಂತಹ ದೊಡ್ಡ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಕೊರೋನಾದಿಂದ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಈ ವರ್ಷದ ಕೊನೆ ಅಂದರೆ ಡಿಸೆಂಬರ್ 31ನೇ ತಾರೀಕಿನವರೆಗೂ ಈ ಆದೇಶ ಜಾರಿಯಲ್ಲಿ ಇರಲಿದೆ. ಸದ್ಯದ ಮೂಲಗಳ ಪ್ರಕಾರ ಡಿಸೆಂಬರ್​​ ನಂತರವೂ ಈ ಆದೇಶದ ಅವಧಿ ಮುಂದುರಿಸಬಹುದು. ನಾಳೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಸಂಬಂಧಪಟ್ಟ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ಧಾರೆ. ಈ ಮಧ್ಯೆಯೇ ಎಚ್-1ಬಿ ಸೇರಿದಂತೆ ವಿವಿಧ ವೀಸಾಗಳನ್ನು ಒಂದು ವರ್ಷದವರೆಗೂ ಅಮಾನತು ಮಾಡಿದ ಟ್ರಂಪ್ ಆದೇಶದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಬೇಸರ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಆರ್ಥಿಕ ಯಶಸ್ಸಿಗೆ ವಲಸಿಗರ ಕೊಡುಗೆ ಅಪಾರ. ಇಂದಿನ ಟ್ರಂಪ್​​ ಆದೇಶದಿಂದ ಬೇಸರವಾಗಿದೆ. ನಾವು ವಲಸಿಗರ ಪರವಾಗಿ ನಿಲ್ಲುತ್ತೇವೆ ಎಂದು ಟ್ವೀಟ್​ ಮಾಡಿದ್ಧಾರೆ. ಇತ್ತೀಚೆಗಷ್ಟೇ ಅಮೆರಿಕ ಸರ್ಕಾರ ಈ ವರ್ಕ್ ವೀಸಾ ನಿರ್ಬಂಧಗಳನ್ನ ಘೋಷಿಸಿದರೆ ಸುಮಾರು 2.4 ಲಕ್ಷ ಮಂದಿಗೆ ಅಮೆರಿಕ ಪ್ರವೇಶ ಅಸಾಧ್ಯವಾಗಬಹುದು. ಭಾರತದಿಂದಲೂ ಪ್ರತೀ ವರ್ಷ ವರ್ಕ್ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದೊಡ್ಡದಿದೆ. ಅಮೆರಿಕದ ಈ ನಿರ್ಬಂಧಗಳಿಂದ ಬಹಳ ತೊಂದರೆ ಆಗುತ್ತದೆ ಎಂದು ಅಲ್ಲಿನ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಅಮೆರಿಕಕ್ಕೆ ಕೆಲಸದ ಮೇಲೆ ಹೋಗಲು ಮೂರು ರೀತಿಯ ವೀಸಾಗಳಿವೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಇವು ವಲಸೆಗೆ ನೀಡುವ ಅನುಮತಿ ಅಲ್ಲ. ಪದವೀಧರರು ಮತ್ತು ವೃತ್ತಿಪರ ಪರಿಣಿತರಿಗೆ ಹೆಚ್-1 ಬಿ ವೀಸಾ ನೀಡಲಾಗುತ್ತೆ. ಉನ್ನತ ಮಟ್ಟದ ಉದ್ಯೋಗಿಗಳಿಗೆ ಎಲ್-1 ವೀಸಾ ಸಿಗುತ್ತದೆ. ಕೌಶಲ್ಯವಿಲ್ಲದ ಕೆಲಸಗಾರರಿಗೆ ತಾತ್ಕಾಲಿಕವಾಗಿ ಹೆಚ್-2 ಬಿ ವೀಸಾ ನೀಡಲಾಗುತ್ತದೆ.


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ