ಲಾಕ್ಡೌನ್ ಘೋಷಣೆ ಆದ ನಂತರ ಅನೇಕರು ಆರ್ಥಿಕ ಬಿಕ್ಕಟ್ಟು ಎದುರುಸಿದ್ದರು. ಈ ವೇಳೆ ಸಾಮಾನ್ಯರಿಗೆ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಆರ್ಬಿಐ ಇಎಂಐ ಪಾವತಿ ಮಾಡುವುದರ ಮೇಲೆ ವಿನಾಯಿತಿ ನೀಡಿತ್ತು. ಶಾಂಕಿಂಗ್ ವಿಚಾರ ಏನೆಂದರೆ, ಇಎಂಐ ಪಾವತಿ ಮಾಡದೆ ಇರುವವರಿಗೆ ಈಗ ಸಾಲ ಸೀಗೋದು ಕಷ್ಟವಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ. ಸಾಲ ನೀಡುವುದಕ್ಕೂ ಮೊದಲು ಬ್ಯಾಂಕ್ನವರು ಸಿಬಿಲ್ ಸ್ಕೋರ್ ನೋಡುತ್ತಾರೆ. ಸರಿಯಾದ ರೀತಿಯಲ್ಲಿ ಸಾಲ ಮರುಪಾವತಿ ಮಾಡಿದ್ದರೆ ಅಂಥವರ ಸಿಬಿಲ್ ಸ್ಕೋರ್ ಉತ್ತಮವಾಗಿರುತ್ತದೆ. ಆದರೆ, ಸಿಬಿಲ್ ಸ್ಕೋರ್ ಉತ್ತಮವಾಗಿರದಿದ್ದರೆ ಅಂಥವರಿಗೆ ಸಾಲ ನೀಡಲು ಬ್ಯಾಂಕ್ಗಳು ನಿರಾಕರಿಸಿತ್ತವೆ. ಮೂಲಗಳ ಪ್ರಕಾರ, ಈಗ ಇಎಂಐ ಕಟ್ಟದೇ ಇರುವವರ ಸಿಬಿಲ್ ಸ್ಕೋರ್ ಡೌನ್ ಆಗಲಿದೆ ಎನ್ನಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬ್ಯಾಂಕ್ನವರು ಇಂಥವರಿಗೆ ಸಾಲ ನೀಡೋಕೆ ನಿರಾಕರಿಸಬಹುದು ಎನ್ನುವ ಮಾತು ಕೇಳಿ ಬಂದಿದೆ. ಇಎಂಐ ಪಾವತಿಯಿಂದ ಸಾಲ ಪಡೆದವರ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿತ್ತು. ಆದರೆ, ಈಗ ಅದು ನಿಜವೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಇನ್ನುಮುಂದೆ ಸಾಲ ಸಿಗಬೇಕು ಎಂದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಇಎಂಐ ಪಾವತಿ ಮಾಡದೆ ಇದ್ದವರದ್ದು. ಇದಕ್ಕೆ ಉತ್ತರವಿದೆ. ಇನ್ನು, ಬರುವ ತಿಂಗಳಲ್ಲಿ ಇಎಂಐ ಸರಿಯಾಗಿ ಪಾವತಿ ಮಾಡಬೇಕು. ಈ ಮೂಲಕ ಮುಂದಾಗುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
Check Also
ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್
Spread the love ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ …