ವಾಷಿಂಗ್ಟನ್: ತೀವ್ರ ಕೋವಿಡ್-19 ಸೋಂಕಿನಿಂದ ತತ್ತರಿಸಿರುವ ಅಮೆರಿಕದಲ್ಲಿ ಈಗ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಹೀಗಾಗಿ ಅಮೆರಿಕ ಸರ್ಕಾರ ವಿದೇಶೀಯರ ಆಗಮನಕ್ಕೆ ಬ್ರೇಕ್ ಹಾಕಿದೆ. ಆದ್ದರಿಂದಲೇ ವರ್ಕಿಂಗ್ ವೀಸಾಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಈ ವರ್ಷದ ಕೊನೆವರೆಗೂ ವರ್ಕಿಂಗ್ ವೀಸಾಗಳ ಮೇಲೆ ನಿರ್ಬಂಧ ಹೇರಿದ್ದಾರೆ. ತಮ್ಮ ದೇಶಕ್ಕೆ ಬರದಂತೆ ವಿದೇಶೀಯರಿಗೆ ಎಚ್- 1ಬಿ ವೀಸಾ ಸೇರಿದಂತೆ ತಾತ್ಕಾಲಿಕ ಉದ್ಯೋಗ ವೀಸಾಗಳ ಮೇಲೆ ಈ ವರ್ಷಾಂತ್ಯದವರೆಗೂ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ಧಾರೆ. ಈ ಆದೇಶಕ್ಕೆ ಸೋಮವಾರ ಸಹಿ ಹಾಕಿರುವ ಟ್ರಂಪ್, ಚ್-1ಬಿ ವೀಸಾ, ಹೆಚ್-2ಬಿ ವೀಸಾ ಮತ್ತು ಎಲ್-1 ವೀಸಾಗಳ ಮೇಲೆ ವಿವಿಧ ನಿರ್ಬಂಧ ಹೇರಿದ್ಧಾರೆ. ಈ ಮೂಲಕ ಅಮೆರಿಕಾಗೆ ಬರುವ ವಲಸಿಗರ ಪ್ರವೇಶಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು, ಟ್ರಂಪ್ ನಿರ್ಬಂಧ ಆದೇಶದಿಂದ ಭಾರತ ಸೇರಿದಂತೆ ವಿವಿಧ ದೇಶಗಳ ಟೆಕ್ಕಿಗಳಿಗೆ ತೊಡಕಾಗಿದೆ. ಜತೆಗೆ ಗೂಗಲ್, ಆಪಲ್, ಫೇಸ್ಬುಕ್, ಮೈಕ್ರೋಸಾಫ್ಟ್ನಂತಹ ದೊಡ್ಡ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದಿದೆ. ಕೊರೋನಾದಿಂದ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಈ ವರ್ಷದ ಕೊನೆ ಅಂದರೆ ಡಿಸೆಂಬರ್ 31ನೇ ತಾರೀಕಿನವರೆಗೂ ಈ ಆದೇಶ ಜಾರಿಯಲ್ಲಿ ಇರಲಿದೆ. ಸದ್ಯದ ಮೂಲಗಳ ಪ್ರಕಾರ ಡಿಸೆಂಬರ್ ನಂತರವೂ ಈ ಆದೇಶದ ಅವಧಿ ಮುಂದುರಿಸಬಹುದು. ನಾಳೆಯಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಸಂಬಂಧಪಟ್ಟ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ಧಾರೆ. ಈ ಮಧ್ಯೆಯೇ ಎಚ್-1ಬಿ ಸೇರಿದಂತೆ ವಿವಿಧ ವೀಸಾಗಳನ್ನು ಒಂದು ವರ್ಷದವರೆಗೂ ಅಮಾನತು ಮಾಡಿದ ಟ್ರಂಪ್ ಆದೇಶದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಬೇಸರ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಆರ್ಥಿಕ ಯಶಸ್ಸಿಗೆ ವಲಸಿಗರ ಕೊಡುಗೆ ಅಪಾರ. ಇಂದಿನ ಟ್ರಂಪ್ ಆದೇಶದಿಂದ ಬೇಸರವಾಗಿದೆ. ನಾವು ವಲಸಿಗರ ಪರವಾಗಿ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ಧಾರೆ. ಇತ್ತೀಚೆಗಷ್ಟೇ ಅಮೆರಿಕ ಸರ್ಕಾರ ಈ ವರ್ಕ್ ವೀಸಾ ನಿರ್ಬಂಧಗಳನ್ನ ಘೋಷಿಸಿದರೆ ಸುಮಾರು 2.4 ಲಕ್ಷ ಮಂದಿಗೆ ಅಮೆರಿಕ ಪ್ರವೇಶ ಅಸಾಧ್ಯವಾಗಬಹುದು. ಭಾರತದಿಂದಲೂ ಪ್ರತೀ ವರ್ಷ ವರ್ಕ್ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದೊಡ್ಡದಿದೆ. ಅಮೆರಿಕದ ಈ ನಿರ್ಬಂಧಗಳಿಂದ ಬಹಳ ತೊಂದರೆ ಆಗುತ್ತದೆ ಎಂದು ಅಲ್ಲಿನ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಅಮೆರಿಕಕ್ಕೆ ಕೆಲಸದ ಮೇಲೆ ಹೋಗಲು ಮೂರು ರೀತಿಯ ವೀಸಾಗಳಿವೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಇವು ವಲಸೆಗೆ ನೀಡುವ ಅನುಮತಿ ಅಲ್ಲ. ಪದವೀಧರರು ಮತ್ತು ವೃತ್ತಿಪರ ಪರಿಣಿತರಿಗೆ ಹೆಚ್-1 ಬಿ ವೀಸಾ ನೀಡಲಾಗುತ್ತೆ. ಉನ್ನತ ಮಟ್ಟದ ಉದ್ಯೋಗಿಗಳಿಗೆ ಎಲ್-1 ವೀಸಾ ಸಿಗುತ್ತದೆ. ಕೌಶಲ್ಯವಿಲ್ಲದ ಕೆಲಸಗಾರರಿಗೆ ತಾತ್ಕಾಲಿಕವಾಗಿ ಹೆಚ್-2 ಬಿ ವೀಸಾ ನೀಡಲಾಗುತ್ತದೆ.
Check Also
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಏಳು ಆರೋಪಿಗಳ ಪೈಕಿ ಇಬ್ಬರಿಗೆ ಶ್ಯೂರಿಟಿ ಸಿಕ್ಕಿಲ್ಲ.
Spread the loveಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿ ಜಾಮೀನು ಪಡೆದಿದ್ದ ಏಳು ಮಂದಿ ಆರೋಪಿಗಳ ಪೈಕಿ ಇಬ್ಬರಿಗೆ …