ಬೆಂಗಳೂರು: ಯಶವಂತರಾಯ ಗೌಡ ಪಾಟೀಲ್ ಅವರ ರಾಜೀನಾಮೆ ಇದು ಬೇರೆ ತರಹದ್ದಲ್ಲ. ಇದು ರೈತರಗಾಗಿ ತೆಗೆದುಕೊಂಡು ನಿರ್ಣಯ. ಅವರೊಂದಿಗೆ ಮಾತನಾಡಿ, ಸಮಾಧಾನಪಡಿಸಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಯಶವಂತರಾಯ ಗೌಡ ಪಾಟೀಲ್ ಬಂದಿದ್ರು, ಮಾತಾಡಿದ್ರು. ಸಮಾಧಾನ ಮಾಡಿ ಕಳಿಸಿದ್ದೇನೆ. ಇದೇನು ಬೇರೆ ಥರದ ರಾಜೀನಾಮೆ ಅಲ್ಲ, ಈಶ್ವರಪ್ಪ ಥರದ ರಾಜೀನಾಮೆ ಅಲ್ಲ. ರೈತರಿಗಾಗಿ, ಜನರಿಗಾಗಿ ಅವರು ತೆಗೆದುಕೊಂಡ ನಿರ್ಣಯ. ನಾನು 224 ಶಾಸಕರಿಗೂ ತಾಳ್ಮೆಯಿಂದ ಇರಿ ಎಂದು ತಿಳಿಸಿದ್ದೇನೆ ಎಂದಿದ್ದಾರೆ.
ಬರ ಪರಿಸ್ಥಿತಿ ಬಗ್ಗೆ ಪ್ರಧಾನಿಯವರೇ ಎಚ್ಚರಿಕೆ ಕೊಟ್ಟಿದ್ದಾರೆ. ಭೀಕರ ಬರಗಾಲ ಇದೆ. ನಾನು ರಾಜ್ಯ ಪ್ರವಾಸ ಮಾಡಿದ್ದೇನೆ. ಇಂಡಿ ಶಾಸಕರು ನನ್ನ ಕಚೇರಿಗೆ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದರು. ನಾನು ಎಲ್ಲೋ ಹೋಗಿದ್ದೆ, ಆಮೇಲೆ ಗೊತ್ತಾಗಿ ಅವರ ಜೊತೆ ಮಾತಾಡಿದ್ದೇನೆ ಎಂದು ತಿಳಿಸಿದ್ದಾರೆ.
ಬರದಿಂದ ಜನರು, ರೈತರು ಸಮಸ್ಯೆಯಲ್ಲಿದ್ದಾರೆ. ಬರ ಘೋಷಣೆ ಮಾಡಲು ಪ್ಯಾರಾಮೀಟರ್ ಇವೆ. ಶಾಸಕರು ಬಂದು ಬೇಡಿಕೆ ಇಟ್ರೂ ಅಂದ ತಕ್ಷಣ ಬರ ಘೋಷಣೆ ಮಾಡಕ್ಕಾಗಲ್ಲ. ಮಾನದಂಡದ ಪ್ರಕಾರವೇ ಘೋಷಣೆ ಮಾಡಬೇಕು. ಇದರ ಬಗ್ಗೆ ಪರಮೇಶ್ವರ್ ಜೊತೆಗೂ ಚರ್ಚೆ ಮಾಡಿದ್ದೇನೆ. ಹೆಚ್ ಕೆ ಪಾಟೀಲ್‌ರಂತಹ ಹಿರಿಯ ನಾಯಕರ ಮೇಲೆನೇ ಅಷ್ಟೊಂದು ಒತ್ತಡ ಇದೆ. ಯಶವಂತರಾಯ ಪಾಟೀಲ್ ಮೇಲೆ ಒತ್ತಡ ಇರಲ್ವಾ? 224 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಅಂತ ನೋಡಲ್ಲ, ಮಾನದಂಡ ಸರಿ ಇದ್ರೆ ಘೋಷಣೆ ಮಾಡ್ತೇವೆ ಎಂದು ಹೇಳಿದ್ದಾರೆ.
Laxmi News 24×7