Breaking News
Home / ಜಿಲ್ಲೆ / ಉಡುಪಿ / ಉಡುಪಿಯಲ್ಲಿ ಗರ್ಭಿಣಿಗೆ ಕೊರೊನಾ ಶಂಕೆ……………..?
Beautiful female laying in bedroom

ಉಡುಪಿಯಲ್ಲಿ ಗರ್ಭಿಣಿಗೆ ಕೊರೊನಾ ಶಂಕೆ……………..?

Spread the love

ಉಡುಪಿ/ಮಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಉಡುಪಿಯಲ್ಲಿ ಗರ್ಭಿಣಿಗೆ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ.

ಗರ್ಭಿಣಿಯನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಮೂರು ದಿನಗಳ ಹಿಂದೆ ದುಬೈನಿಂದ ಬಂದಿದ್ದರು. ಕೆಮ್ಮು, ನೆಗಡಿ ಮತ್ತು ಶೀತ ಇದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಶೇಷ ವಾರ್ಡ್ ನಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗ ಲ್ಯಾಬ್‍ಗೆ ಗರ್ಭಿಣಿಯ ಗಂಟಲಿನ ದ್ರವ ರವಾನೆ ಮಾಡಲಾಗಿದೆ. ಮಾರ್ಚ್ 13 ರಂದು ದುಬೈನಿಂದ ಮಹಿಳೆ ಬಂದಿದ್ದರು ಎಂದು ಉಡುಪಿ ಡಿ.ಎಚ್.ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.

ಇತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಸೋಮಾವರ ವಿದೇಶದಿಂದ ಬಂದವರಿಗೆ ಮಂಗಳೂರಿನ ಏರ್‌ಪೋರ್ಟ್‌ ನಲ್ಲಿ 838 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿತ್ತು. ಅದರಲ್ಲಿ 10 ಜನರಿಗೆ ಕೊರೊನಾ ಶಂಕೆ ಕಾಣಿಸಿಕೊಂಡಿದೆ. ಭಾನುವಾರ ಕಳುಹಿಸಿದ್ದ 11 ಜನರ ಸ್ಯಾಂಪಲ್ ನೆಗೆಟಿವ್ ಬಂದಿದೆ. ಸೋಮವಾರ 5 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.


Spread the love

About Laxminews 24x7

Check Also

ಕಚ್ಚಿದ ಹಾವನ್ನು ಕೊಂದು ಆಸ್ಪತ್ರೆಗೆ ತೆಗೆದುಕೊಂಡು ಬಂದ ಮಹಿಳೆ; ಬೆಚ್ಚಿಬಿದ್ದ ವೈದ್ಯರು

Spread the loveತೆಲಂಗಾಣ: ಕಚ್ಚಿದ ಹಾವನ್ನು ಹೊಡೆದು ಕೊಂದು ಮಹಿಳೆ ತನ್ನ ಜೆತೆಗೆ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾಳೆ. ಈ ಘಟನೆ ತೆಲಂಗಾಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ