ಉಡುಪಿ: ವಿವಾಹಿತ ಮಹಿಳೆಯೊಬ್ಬಳು ತನ್ನ ಮಗುವನ್ನು ತವರು ಮನೆಯಲ್ಲಿ ಬಿಟ್ಟು ತನ್ನ ಹಳೆ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದಲ್ಲಿ ನಡೆದಿದೆ.
ಅಜೆಕಾರು ಕೈಕಂಬ ನಿವಾಸಿ ಮುನ್ಶಿರಾ ಮೆಹಮೂಬ್(ಹೆಸರು ಬದಲಾಯಿಸಲಾಗಿದೆ) ಪರಾರಿಯಾದ ಮಹಿಳೆ. ಮದುವೆಗೆಂದು ಮಂಗಳೂರಿಗೆ ಹೋದ ಕಾರಣಕ್ಕೆ ಈ ಮಹಿಳೆ, ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಆಗಿದ್ದಳು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೆಯ ಪ್ರಿಯಕರನ ಜೊತೆ ಮಹಿಳೆ ಪರಾರಿಯಾಗಿದ್ದಾಳೆ.
ಮಹಿಳೆ 8 ವರ್ಷದ ಹಿಂದೆ ಉದ್ಯಾವರದ ವ್ಯಕ್ತಿ ಜೊತೆ ಮದುವೆಯಾಗಿ ಪುಣೆಯ ಲೋನಾವಲದಲ್ಲಿ ನೆಲೆಸಿದ್ದಳು. ಕೌಟುಂಬಿಕ ಸಮಸ್ಯೆಯಿಂದ ಆಕೆ ತನ್ನ 8 ವರ್ಷದ ಮಗಳೊಂದಿಗೆ ಊರಿಗೆ ಬಂದು ಹೆತ್ತವರೊಂದಿಗೆ ವಾಸವಾಗಿದ್ದಳು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮಕದಲ್ಲಿ ಭಾಗವಹಿಸಿ, ಮರಳಿ ಊರಿಗೆ ಬಂದಿದ್ದು ಕ್ವಾರಂಟೈನ್ ಆಗಿದ್ದಳು.
ಇತ್ತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಇದೀಗ ಆಕೆ ಪತ್ತೆಯಾಗಿದ್ದು, ಆಕೆಯನ್ನು ಪೋಷಕರ ಜೊತೆಗೆ ಕಳುಹಿಸಲಾಗಿದೆ.