Breaking News

ಯುವತಿಯರ ಒಳಉಡುಪು, ಸ್ಯಾನಿಟರಿ ಪ್ಯಾಡ್‌ ಕಳ್ಳತನ; ವಿಚಿತ್ರವಾಗಿ ಜೋಡಿಸಿ ಲೈಂಗಿಕತೃಪ್ತಿ ಪಡ್ತಿದ್ದ ಕಾಮುಕ

Spread the love

ಬೆಂಗಳೂರು: ಕೋರಮಂಗಲ ವ್ಯಾಪ್ತಿಯ ಕೋ-ಲಿವಿಂಗ್ ಪಿಜಿಗಳಲ್ಲಿ ವಾಸಿಸುವ ಯುವತಿಯರ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಕದ್ದು, ಅವುಗಳನ್ನು ವಿಚಿತ್ರ ರೀತಿಯಲ್ಲಿ ಜೋಡಿಸಿ ಲೈಂಗಿಕ ತೃಪ್ತಿ ಪಡೆಯುತ್ತಿದ್ದ ಕಾಮುಖನೊಬ್ಬನನ್ನು ಕೋರಮಂಗಲ ಪೊಲೀಸರು  ಬಂಧಿಸಿದ್ದಾರೆ.

ಆರೋಪಿಯನ್ನ ಗಿರಿರಾಜ್ ಎಂದು ಗುರುತಿಸಲಾಗಿದ್ದು, ಈತ ಪ್ರತಿಷ್ಠಿತ ಸಂಸ್ಥೆಯಲ್ಲಿ ಆಡಿಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪಿಜಿಯಲ್ಲೇ ನಡೆಯುತ್ತಿತ್ತು ವಿಚಿತ್ರ ಕಳ್ಳತನ
ಕೋರಮಂಗಲದ ಖಾಸಗಿ ಪಿಜಿಯೊಂದರಲ್ಲಿ ಪದೇಪದೇ ಯುವತಿಯರ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ಕಾಣೆಯಾಗುತ್ತಿದ್ದವು. ಹೊರಗಿನ ವ್ಯಕ್ತಿಯೊಬ್ಬ ಪಿಜಿಗೆ ಬಂದು ಕಳ್ಳತನ ಮಾಡಿರುವ ಯಾವುದೇ ಸುಳಿವು ಆರಂಭದಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ಕುರಿತು ಪಿಜಿಯಲ್ಲಿದ್ದ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಪಿಜಿಯಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಕೂಲಂಕುಷವಾಗಿ ಪರಿಶೀಲಿಸಿದ್ದಾರೆ.

ಪಿಜಿಯ ಮೊದಲ ಮಹಡಿಯಲ್ಲಿ ಮಹಿಳೆಯರು ಹಾಗೂ ಎರಡನೇ ಮಹಡಿಯಲ್ಲಿ ಪುರುಷರು ವಾಸಿಸುತ್ತಿದ್ದರು. ತನಿಖೆ ವೇಳೆ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬನೇ ಮೊದಲ ಮಹಡಿಯ ರೂಮ್‌ಗಳಿಗೆ ತೆರಳಿ ಕಳ್ಳತನ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ರೂಮ್‌ನಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿ ಆರೋಪಿ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನ ಕದಿಯುತ್ತಿದ್ದ ಎಂಬುದು ಗೊತ್ತಾಗಿದೆ.

ಕದ್ದ ವಸ್ತುಗಳನ್ನು ವಿಚಿತ್ರವಾಗಿ ಜೋಡಿಸಿ ಆನಂದ!
ಪೊಲೀಸರು ಹೇಳುವಂತೆ, ಕದ್ದ ವಸ್ತುಗಳನ್ನು ತನ್ನ ರೂಮ್‌ನಲ್ಲಿ ವಿಚಿತ್ರ ರೀತಿಯಲ್ಲಿ ಜೋಡಿಸಿಕೊಂಡು ಲೈಂಗಿಕವಾಗಿ ತೃಪ್ತಿ ಪಡೆಯುತ್ತಿದ್ದ. ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ