Breaking News

ಕಾಂಗ್ರೆಸ್‌ನಲ್ಲಿ ಡ್ರೈವರ್ ಬದಲಾಗಿದ್ದಾರೆ, ಬಸ್, ಎಂಜಿನ್ ಕೆಟ್ಟು ಹೋಗಿದೆ: ಅಶೋಕ್‌ ವ್ಯಂಗ್ಯ

Spread the love

ಬೆಂಗಳೂರು: ಕಾಂಗ್ರೆಸ್‌ನಲ್ಲಿ  ಡ್ರೈವರ್ ಬದಲಾಗಿದ್ದಾರೆ ಅಷ್ಟೇ, ಬಸ್, ಎಂಜಿನ್ ಕೆಟ್ಟು ಹೋಗಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್  ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಡಿದ ಅವರು, ಈ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾವಣೆ ಆಗಿದ್ದಾರೆ. ಬಸ್ ಮತ್ತು ಎಂಜಿನಿ ಕೆಟ್ಟು ಹೋಗಿದೆ. ಡ್ರೈವರ್ ಬದಲಾದರೇನು? ಕೆಟ್ಟು ಹೋಗಿರೋ ಬಸ್ ಓಡಲು ಸಾಧ್ಯವೇ? ಇದು ಕೆಟ್ಟು ಹೋಗಿರೋ ಗಾಡಿ. ಸಿದ್ದರಾಮಯ್ಯ ಅವರು ಕೆಟ್ಟು ಹೋಗಿರೋ ಗಾಡಿ ಡಿಕೆಶಿಗೆ ಕೊಟ್ಟಿದ್ದಾರೆ. ಸಾಲ ಮಾಡಿ ಡಿಸೇಲ್ ಹಾಕಿಸುವ ಬಸ್ ಅನ್ನ ಸಿದ್ದರಾಮಯ್ಯ  ಡಿಕೆಶಿಗೆ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ

ರಾಜ್ಯದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನಾನು ಅಹಿಂದ ನಾಯಕ ಅಂತಿದ್ದರು. ದೇಶದಲ್ಲಿ ನಾನೊಬ್ಬನೇ ಅಹಿಂದ ಸಿಎಂ ಇರೋದು ಅಂತ ಹೇಳ್ತಾ ಇದ್ದರು. ನನ್ನನ್ನ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಅಂತ ಕಾನ್ಫಿಡೆನ್ಸ್‌ನಲ್ಲಿ ಇದ್ದರು. ರಾಹುಲ್ ಗಾಂಧಿ ಕಿತಾಪತಿಯಿಂದ ಈಗ ಸ್ಥಾನ ಹೋಗಿದೆ‌ ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

5 ಲಕ್ಷ ಜನರಿಗೆ ಉದ್ಯೋಗ, 1.5 ಕೋಟಿ ಮಾನವ ದಿನ ಸೃಷ್ಟಿಗೆ ಅವಕಾಶ: ಈಶ್ವರ್‌ ಖಂಡ್ರೆ

Spread the loveಬೆಂಗಳೂರು: ಜುಲೈ 1ರಿಂದ ಜಾರಿಗೆ ತರಲಾಗಿರುವ ಮನ್ರೇಗಾದ  ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ  ಪ್ರತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ