Breaking News

ಪ್ರತಿ ಅನುದಾನದಲ್ಲೂ ಕೇಂದ್ರ ಅನ್ಯಾಯ ಮಾಡ್ತಿದೆ – ಎಂ.ಬಿ ಪಾಟೀಲ್ ಕಿಡಿ

Spread the love

ಬೆಂಗಳೂರು: ಬರ ಪರಿಹಾರದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೋಗುವ ಸಂಬಂಧ ಕೇಂದ್ರ ಸರ್ಕಾರದ  ವಿರುದ್ಧ ಸಚಿವ ಎಂ.ಬಿ ಪಾಟೀಲ್  ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ  ಮಾತನಾಡಿದ ಅವರು, ಕೇಂದ್ರ ಪ್ರತಿ ಅನುದಾನದಲ್ಲೂ ಅನ್ಯಾಯ ಮಾಡುತ್ತಿದೆ. ಗ್ರಾಮಪಂಚಾಯ್ತಿ ಅನುದಾನ ಕೊಡ್ತಿಲ್ಲ. ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ಕೊಡಲಿಲ್ಲ. ಕಳೆದ ಬಾರಿ ನಾವು ಕೋರ್ಟಿಗೆ ಹೋಗಿ ಅನುದಾನ ತರಬೇಕಾಯಿತು. ಈಗ ಮತ್ತೆ ಕೋರ್ಟ್‌ಗೆ ಹೋಗೋ ಸ್ಥಿತಿ ಬಂದಿದೆ ಎಂದಿದ್ದಾರೆ. 

ಇದರ ನಡುವೆ ಡಿಸಿಎಂ ಪರಮೇಶ್ವರ್, 3 ಬಾರಿ ಮೆಮೊರಾಂಡಮ್ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರದ ಮುಂದಿನ ನಡೆ ನೋಡಿಕೊಂಡು ಮುಂದೇನು ಮಾಡಬೇಕೆಂದು ಚರ್ಚಿಸ್ತೇವೆ ಅಂದಿದ್ದಾರೆ.

ಇನ್ನು, ರಾಜ್ಯಗಳಿಗೆ ಅಗತ್ಯವಾದ ಅನುದಾನ ನೀಡುವುದು ಕೇಂದ್ರದ ಜವಾಬ್ದಾರಿ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಕೊಡ್ಲಿಲ್ಲ. ಈ ಅವಧಿಯಲ್ಲೂ ವಿಶ್ವಾಸವಿಲ್ಲ ಅಂತ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಈ ಮಧ್ಯೆ, ರಾಜ್ಯ ಸರ್ಕಾರ ಪದೇ ಪದೇ ಕಾಲು ಕೆರೆದುಕೊಂಡು ಜಗಳವಾಡುತ್ತಿದೆ. ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ ಅಂತ ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ