Breaking News

ವಿಜಯಪುರ | ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

Spread the love

ವಿಜಯಪುರ: ಜಿಲ್ಲೆಯ ಚಡಚಣ  ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದರು. ಚಡಚಣ ತಾಲೂಕಿನ ತದ್ದೇವಾಡಿ, ಮಾಣಂಕಲಗಿ ಅಡವಿವಸ್ತಿ, ಮರಗೂರ ಅಡವಿ ವಸ್ತಿ ಸೇರಿದಂತೆ ಸುತ್ತಮುತ್ತ ಚಿರತೆ ಓಡಾಡುತ್ತಿತ್ತು. ನಂತರ ಮುಳ್ಳು ಕಂಟಿ, ಕಬ್ಬಿನ ಗದ್ದೆಯಲ್ಲಿ ಚಿರತೆ ಅಡಗಿ ಕೂತಿತ್ತು.

ಇನ್ನು ಚಿರತೆ ಕಳೆದ ತಿಂಗಳು ಹಲವು ಎಮ್ಮೆ ಕರು, ಆಕಳು ಕರುಗಳನ್ನು ತಿಂದಿತ್ತು. ಎಮ್ಮೆ ಕರು ತಿಂದ ಜಾಗದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದರು. ಇಂದು ಮತ್ತೆ ಎಮ್ಮೆ ಕರು ತಿನ್ನಲು ಬಂದು ಚಿರತೆ ಬೋನ್‌ಗೆ ಬಿದ್ದಿದೆ. ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಶಿವರುದ್ರಪ್ಪ ಕಬಾಡಗಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಚಿರತೆ ಸೆರೆ ಹಿಡಿದ ಹಿನ್ನೆಲೆ ಚಡಚಣ ತಾಲೂಕಿನ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.


Spread the love

About Laxminews 24x7

Check Also

ಪ್ರದೀಪ್ ಈಶ್ವರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನ – ತಂದೆಯಾದ ಸಂಭ್ರಮದಲ್ಲಿ ಶಾಸಕ

Spread the loveಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ