Breaking News
Home / ಜಿಲ್ಲೆ / ಸಾರಾಯಿ ಮುಕ್ತ ಗ್ರಾಮಕ್ಕೆ ಪಣ

ಸಾರಾಯಿ ಮುಕ್ತ ಗ್ರಾಮಕ್ಕೆ ಪಣ

Spread the love

ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಕರುನಾಡ ಯುವ ಪಡೆ ಸಂಘಟನೆಯ ನೇತೃತ್ವದಲ್ಲಿ ಸಾರಾಯಿ ಮುಕ್ತ ಸಮಾಜಕ್ಕಾಗಿ ಜನಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ವತಿಯಿಂದ ಊರಿನ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜನರನ್ನು ಜಾಗೃತಿ ಮೂಡಿಸಿದರು

ಕರುನಾಡ ಯುವ ಪಡೆ ಸಂಘಟನೆಯ ಅಧ್ಯಕ್ಷರಾದ ತುಕಾರಾಮ ಪವಾರ ಕುಡಿತದಿಂದ ದುಡ್ಡು ಹಾಳಾಗುತ್ತೆ ಮನೆಯಲ್ಲಿ ಗೌರವವಿರುವುದಿಲ್ಲ, ಸುಖ-ಶಾಂತಿ ನೆಮ್ಮದಿಯಿರುವುದಿಲ್ಲ ಅಲ್ಲದೆ ಕುಡಿತದಿಂದ ಸತ್ತು ಹೋದರೆ ಹೆಂಡತಿ ಮಕ್ಕಳು ಅನಾಥರಾಗುತ್ತಾರೆ. ಆತನನ್ನೇ ನಂಬಿದ ಸಂಸಾರ ಸಂಪೂರ್ಣ ಬೀದಿಪಾಲಾಗುತ್ತದೆ. ಒಂದು ವೇಳೆ ಕುಡಿತವನ್ನು ಬಿಟ್ಟರೆ ಹಣ ಉಳಿಯುತ್ತೆ ಸಂಸಾರ ಉಳಿಯುತ್ತೆ ಅಲ್ಲದೆ
ಸುಖ-ಶಾಂತಿ ನೆಮ್ಮದಿ ಜೀವನ ನಡೆಸಬಹುದು ಎಂದರು.

ಶುದ್ಧವಾದ ಕುಡಿಯುವ ನೀರು ಸಿಗದ ಹಳ್ಳಿಗಳಲ್ಲಿ ಕೈಗೆಟುಕುವಂತೆ ಸಾರಾಯಿ ಸಿಗುತ್ತಿರುವುದು ರೈತರ ಬಡವರ, ಮಧ್ಯಮವರ್ಗದ, ಕೃಷಿ ಕೂಲಿ ಕಾರ್ಮಿಕರ ಬಾಳನ್ನು ಹಾಳು ಮಾಡುವುದಲ್ಲದೆ ನೆಮ್ಮದಿ ವಾತಾವರಣ ಕಣ್ಮರೆಯಾಗಿ ಎಲ್ಲೆಲ್ಲೂ ಜಗಳ ಗಲಾಟೆ ಸೇರಿದಂತೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಇಂತಹ ದುಶ್ಚಟಗಳಿಗೆ ಅಂಟಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ತಾಯಂದಿರ ನೆಮ್ಮದಿ ಬದುಕಿಗಾಗಿ ಅವರ ಆಸೆಯಂತೆ ಇಂದು ನಮ್ಮ ಕರುನಾಡ ಯುವ ಪಡೆಯ ಎಲ್ಲಾ ಕಾರ್ಯಕರ್ತರು ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕರುನಾಡ ಯುವ ಪಡೆಯ ತುಕಾರಾಮ ಪವಾರ, ನಾಗು ಥೂರಾತ, ಅಪ್ಪಾರಾಯ ಅಹಿರಸಂಗ, ಶಿವಾಜಿ ಜಾದವ್, ಉದಯ ಪವಾರ, ಪುಂಡಲಿಕ ಜಾದವ್, ಮಹೇಶ್ ಹಿರೇಮಠ್, ಆಕಾಶ್ ಹಂಡಗೆ, ಈರಪ್ಪ ಬಳಬಟ್ಟಿ ಮಲ್ಲು ಬಡಿಗೇರ್, ಸಚೀನ ಕುಂಬಾರ, ಸಿದ್ದು ತೊಗರಿ ಸಂಘಟನೆಯ ಎಲ್ಲಾ ಸದಸ್ಯರು ಹಾಗೂ ಶಿಕ್ಷಕರು ಹಾಜರಿದ್ದರು.


Spread the love

About Laxminews 24x7

Check Also

ಕಾಶಿ ವಿಶ್ವನಾಥನ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆ. ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ. ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಅಲಂಕೃತವಾಗಿದ್ದ ಪಲ್ಲಕ್ಕಿ.

Spread the loveವಾರಾಣಸಿ (ಉತ್ತರ ಪ್ರದೇಶ): ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರೀತಿಯಲ್ಲಿ ಭಗವಾನ್ ವಿಶ್ವನಾಥನ ಪಲ್ಲಕ್ಕಿಯ ಮೆರವಣಿಗೆಯು ಧಾರ್ಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ