Breaking News
Home / ಜಿಲ್ಲೆ / ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ಆರೋಗ್ಯ ಗುಣಮುಖರಾಗಲಿ……

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ಆರೋಗ್ಯ ಗುಣಮುಖರಾಗಲಿ……

Spread the love

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ಆರೋಗ್ಯ ಗುಣಮುಖರಾಗಲಿ ಎಂದು ಯಾದಗಿರಿ ಜಯ ಕರ್ನಾಟಕ ಸಂಘಟನೆಯು ದೇವರಲ್ಲಿ ಪ್ರಾಥನೆ …..

ಯಾದಗಿರಿ ಜಿಲ್ಲೆಯ ಲಕ್ಷ್ಮಿ ದೇವಸ್ಥಾನದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಎನ್ ವಿಶ್ವನಾಥ್ ನಾಯಕ್ ಇವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉರುಳು ಸೇವೆ ಮಾಡಿದರು

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ ಶ್ರೀ ಮುತ್ತಪ್ಪ ರೈ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರಿಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಅವರು ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಯಾದಗಿರಿ ಜಿಲ್ಲೆಯ ಜಯ ಕರ್ನಾಟಕ ಸಂಘಟನೆ ವತಿಯಿಂದ ಉರುಳು ಸೇವೆ ಮತ್ತು ಅಂಗೈಯಲ್ಲಿ ಕರ್ಪುರವನ್ನು ಬೆಳಗಿ ತಾಯಿ ಲಕ್ಷ್ಮಿ ದೇವಿಗೆ ಜ್ಯೋತಿ ಬೆಳಗಿದರು.

ಇದೇ ವೇಳೆ ಜಿಲ್ಲಾಧ್ಯಕ್ಷರಾದ ವಿಶ್ವನಾಥ್ ನಾಯಕ್ ಇವರು ಮಾತನಾಡಿ ನಮ್ಮ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರು ಆದ ಸನ್ಮಾನ್ಯ ಶ್ರೀ ಮುತ್ತಪ್ಪ ರೈ ಅಣ್ಣನವರು ಈ ಕನ್ನಡ ನಾಡು ,ನುಡಿ,ಜಲಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಸದಾ ಬಡವರಿಗಾಗಿ ,ನೊಂದವರ ,ಕಷ್ಟದಲ್ಲಿರುವ ಜನಗಳಿಗೆ ಸಹಾಯ ನೀಡುವ ಅವರ ಕೈ ಯಾವತ್ತು ಇಲ್ಲ ಅಂತ ಹೇಳಿಲ್ಲ ಅವರು ಈ ನಮ್ಮ ನಾಡಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಇನ್ನು ಅವರು ಈ ನಾಡಿಗೆ ಸೇವೆ ಸಲ್ಲಿಸಲು ಮುಕ್ಕೋಟಿ ದೇವರಲ್ಲಿ ನಾವು ಪ್ರಾರ್ಥನೆ ಮಾಡುತ್ತೇವೆ ಈ ಆರು ಕೋಟಿ ಕನ್ನಡಿಗರ ಆಶೀರ್ವಾದ ಅವರ ಜೊತೆ ಇದೆ , ನಮ್ಮೆಲ್ಲರ ಪ್ರೀತಿ ಅವರ ಜೊತೆ ಇರುವಾಗ ಅವರಿಗೆ ಏನು ಅಗಲು ಸಾಧ್ಯವಿಲ್ಲ ನಮ್ಮ ಜಯ ಕರ್ನಾಟಕ ಸಂಘಟನೆಯ ಸೇನಾನಿಗಳು ಯಾವಾಗಲೂ ದೇವರಲ್ಲಿ ಪ್ರಾರ್ಥನೆ ಮಾಡೋದು ,ಅವರ ಸೇವೆ ಬಹು ಮುಖ್ಯವಾದದ್ದು ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಬಿ ಎನ್ ವಿಶ್ವನಾಥ್ ನಾಯಕ್ ಇವರು ಮಾತನಾಡುತ್ತ ಭಾವುಕರಾಗಿ ಕಣ್ಣೀರು ಹಾಕಿದರು ಆದಷ್ಟು ಬೇಗ ಮುತ್ತಪ್ಪ ರೈ ಅವರು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು

ಇದೇ ವೇಳೆ ವಿಜಯಕುಮಾರ ಮಗ್ದಂಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್ ಗುತ್ತೆದಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಹಣಮಂತ ಪೂಜಾರಿ, ,ಜಿಲ್ಲಾ ಸಂ,ಕಾರ್ಯದರ್ಶಿ ನಾಗೇಶ್ ಗೌಡ ಅಜಯ್ ಮಾಸನ್ ಜಿಲ್ಲಾ ಯುವ ಘಟಕ ಅಧ್ಯಕ್ಷ ರು ವೆಂಕಟೇಶ ದೊರೆ ಮಾರುತಿ ಮುದ್ನಾಳ ಇನ್ನೂ ಸಂಘಟನೆಯ ಪದಾಧಿಕಾರಿಗಳು ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು .


Spread the love

About Laxminews 24x7

Check Also

ಚುನಾವಣೆ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ: ವಿಚಾರಣೆ ಏ.20ಕ್ಕೆ ಮುಂದೂಡಿಕೆ

Spread the loveಶಿವಮೊಗ್ಗ: ಲೋಕಸಭೆ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣೆ ಪ್ರಚಾರದ ವೇಳೆ ಹಾಗೂ ಸಭೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ