Breaking News

ಸಿದ್ದರಾಮಯ್ಯಗೆ ಬಂಜಾರ ವಿಚಾರ ಗೊತ್ತಿಲ್ಲ: ಪಿ. ರಾಜೀವ್ ಆರೋಪ

Spread the love

ಬಾಗಲಕೋಟೆ, ಮಾರ್ಚ್ 27: ಉಪಚುನಾವಣೆ ಹಿನ್ನೆಲೆ ಬಾಗಲಕೋಟೆ ಮತಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಪಿ. ರಾಜೀವ್ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠರ ಪರವಾಗಿ ಹಾಲೂರು ಎಲ್.ಟಿ. ಗ್ರಾಮದಲ್ಲಿ ಲಂಬಾಣಿ ಸಮುದಾಯದ ನಡುವೆ ಮತಯಾಚನೆ ನಡೆಸಿ ಗಮನ ಸೆಳೆದರು.
ಆಲೂರು ಎಲ್,ಟಿ ಗ್ರಾಮದಲ್ಲಿ ನಡೆದ ಪ್ರಚಾರದ ವೇಳೆ ಲಂಬಾಣಿ (ಬಂಜಾರ) ಸಮುದಾಯದ ಸಂಸ್ಕøತಿ, ಪರಂಪರೆ ಹಾಗೂ ಅವರ ಶಕ್ತಿಯ ಕುರಿತು ಮಾತನಾಡಿದ ಅವರು, ಈ ಸಮುದಾಯದ ಗೌರವ ಮತ್ತು ಸ್ವಾಭಿಮಾನ ಕಾಪಾಡಿಕೊಳ್ಳುವುದು ಅಗತ್ಯವೆಂದು ಹೇಳಿದರು.
ಇದಕ್ಕೂ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿದ ಪಿ. ರಾಜೀವ್, ಬಂಜಾರ ಸಮುದಾಯದ ಬಗ್ಗೆ ಸಮರ್ಪಕ ಅರಿವು ಮತ್ತು ಕಾಳಜಿ ಸರ್ಕಾರದ ಬಳಿ ಇಲ್ಲ ಎಂದು ಆರೋಪಿಸಿದರು. ಹಿಂದಿನ ಅವಧಿಯಲ್ಲಿ ಈ ಸಮುದಾಯದ ಅಭಿವೃದ್ಧಿಗೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದರು.
“ಈಗ ಚುನಾವಣೆ ಬಂದಾಗ ಮಾತ್ರ ಸಮುದಾಯದ ಬಗ್ಗೆ ಮಾತಾಡುವುದು ಸರಿಯಲ್ಲ. ಹಣ ಅಥವಾ ಉಡುಗೊರೆಗಳನ್ನು ಹಂಚುವ ಮೂಲಕ ಮತ ಪಡೆಯಲು ಯತ್ನಿಸುವುದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ,” ಎಂದು ಅವರು ಹೇಳಿದರು.
ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮಾತನಾಡಿ ಮತಕ್ಷೇತ್ರದ ವಿವಿಧ ತಾಂಡಾಗಳಲ್ಲಿ ಸಾಕಷ್ಟು ಅಭವೃದ್ದಿ ಕೆಲಸಗಳನ್ನು ಮಾಡಲಾಗಿದೆ, ಮತ್ತೆ ಮತಕ್ಷೇತ್ರದ ಸೇವೆ ಸಲ್ಲಿಸಲು ಬಿಜೆಪಿಗ ಮತ ನೀಡಿ ಎಂದರು.
ಮುಖಂಡ ಹೂವಪ್ಪ ರಾಠೋಡ ಸೇರಿದಂತೆ ಹಲವಾರು ಸಮುದಾಯದ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ, ಸೋಮಸಿಂಗ ವಮಾಣಿ, ಭೀಮಸಿಂಗ್, ವಮಾಣಿ, ಚಾಪಣ್ಣ ಲಮಾಣಿ, ವೆಂಕಟೇಶ್ ನಾಯಕ್, ಸಂತೋಷ ಚವ್ಹಾಣ, ಮುತ್ತತ್ತಿ ಗ್ರಾಮದ ಕರಿಯಪ್ಪ ಕಟ್ಟಿಮನಿ, ಅರ್ಜುನ, ಚವ್ಹಾಣ, ಪರಶು ಗೋವಾ, ಶರಣಪ್ಪ ಆಲೂರ, ಯಮನಪ್ಪ ಪಾಟೀಲ, ರಾಘವೇಂದ್ರ ದಳವಾಯಿ, ಹಿರೇ ಗುಳಬಾಳದ ಹನಮಂತ ಮೇಟಿ, ಚನ್ಪಯ್ಯ ಫೂಜಾರಿ, ಯಲ್ವಪ್ಪ ವಾಲಿಕಾರ, ಗೂಳಪ್ಪ ದೋಣಿ, ಬಸಪ್ಪ ಮೇಟಿ, ಸಂತೋಷ ವಾಲಿಕಾರ, ಜಡ್ರಾಮಕುಂಟಿಯ ಚನ್ನಪ್ಪಗೌಡ ಪಾಟೀಲ್, ಸಂಗಪ್ಪ ಕೂರಿ, ಶ್ರೀಶೈಲ್ ಖಾಕಂಡಕಿ, ಮಂಜುನಾಥ ಕಿರಸೂರ, ಸೂರೇಶ ಕುರಿ, ಹೊದ್ಲೂರಿನ ಪರಸಪ್ಪ ಕುಂಟೋಜಿ, ಪರಸಪ್ಪ ಬಂಗಿ, ಬಸಪ್ಪ ಅಂಗಡಿ, ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ