Breaking News

ಕಿಂಗ್ ಕೊಹ್ಲಿ ಜೊತೆ ಸಿದ್ದಾಪುರದ ಪ್ರತಿಭೆ ಮಿಂಚಿಂಗ್: ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಮಲೆನಾಡಿನ ನಾಗರಾಜ ಹೆಗಡೆ

Spread the love

ಸಿದ್ದಾಪುರ:ಅಂತರಾಷ್ಟ್ರೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಬಹುದೊಡ್ಡ ಕನಸು. ಈ ಮಹಾನ್ ಸಾಧನೆಯನ್ನು ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಮಲೆನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ.

ಮಕ್ಕಿಗದ್ದೆ ಮೂಲದವರಾದ ನಾಗರಾಜ ಹೆಗಡೆ, ಪ್ರಸ್ತುತ ಸಿದ್ದಾಪುರದ ವಿದ್ಯಾಗಿರಿಯಲ್ಲಿ ವಾಸವಿರುವ ಖ್ಯಾತ ಶಿಕ್ಷಕ ದಂಪತಿಗಳಾದ ಜಿ.ಜಿ. ಹೆಗಡೆ ಮತ್ತು ರೂಪಾ ಹೆಬ್ಬಾರ ಅವರ ಪುತ್ರ. ಬಾಲ್ಯದಿಂದಲೇ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು, ಇದೀಗ ವಿರಾಟ್ ಕೊಹ್ಲಿ ಅವರೊಂದಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಡೀ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಸಿದ್ದಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಹಾಗೂ ಜೈನ್ ಕಾಲೇಜಿನಲ್ಲಿ ಎಂ.ಬಿ.ಎ ಪೂರೈಸಿರುವ ನಾಗರಾಜ, ಕೇವಲ ಓದಿಗೆ ಸೀಮಿತವಾಗದೆ ಕ್ರಿಕೆಟ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಐದು ವರ್ಷಗಳಿಂದ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವ ಇವರು, ಕ್ರೀಡಾ ವಿಜ್ಞಾನದಲ್ಲೂ (Sports Science) ಪರಿಣತಿ ಪಡೆದಿದ್ದಾರೆ.

ವಿಶ್ವಪ್ರಸಿದ್ಧ ‘ಓಕ್ಲಿ ಮೆಟಾ ಸನ್ ಗ್ಲಾಸ್’ (Oakley Meta Sunglasses) ಜಾಹೀರಾತಿಗಾಗಿ ನಡೆದ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ನಾಗರಾಜ ಪಾಲ್ಗೊಂಡಿದ್ದರು. ಅವರ ಅದ್ಭುತ ಆಟದ ವೈಖರಿ ಹಾಗೂ ದೈಹಿಕ ಕ್ಷಮತೆಯನ್ನು (Fitness) ಗಮನಿಸಿದ ಸಂಸ್ಥೆಯು, ಸುಮಾರು 30 ಜನ ಸ್ಪರ್ಧಿಗಳ ಪೈಕಿ ನಾಗರಾಜ ಅವರನ್ನು ಆಯ್ಕೆ ಮಾಡಿದೆ. ಪ್ರಸ್ತುತ ಬೆಂಗಳೂರಿನ ’91 ಸ್ಪೋರ್ಟಿಂಗ್’ ಕಂಪನಿಯಲ್ಲಿ ಸ್ಟ್ರೆಂತ್ ಎಂಡ್ ಕಂಡೀಷನಿಂಗ್ ಕೋಚ್ ಆಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.


Spread the love

About Laxminews 24x7

Check Also

ಅಡ್ಡ ಮತದಾನ ಮಾಡಿದ್ದು ಸಾಬೀತಾದರೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಚಂದ್ರು ಲಮಾಣಿ

Spread the loveಗದಗ: ಪ್ರಾಮಾಣಿಕವಾಗಿ ಎನ್‌ಡಿಎಅಭ್ಯರ್ಥಿಗೆ ಮತ ಹಾಕಿದ್ದೇನೆ. ಧರ್ಮಸ್ಥಳ ಮಂಜುನಾಥನ ಮೇಲೆ ಮಾತ್ರವಲ್ಲ, ಯಾವುದೇ ದೇವರ ಮೇಲೆ ಪ್ರಮಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ