Breaking News

ಟ್ರ್ಯಾಕ್ಟರ್ ಹರಿದು ಏಳು ವರ್ಷದ ಬಾಲಕ ದಾರುಣ ಸಾವು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Spread the love

ಕೋಲಾರ: ಟ್ರ್ಯಾಕ್ಟರ್  ಹರಿದು ಏಳು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಮೋಹನ್ (7) ಮೃತ ಬಾಲಕ. ಕೋಲಾರದ ಇಟಿಸಿಎಂ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದ್ದು, ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದ ಬಾಲಕ ಕೆಳಗೆ ಬಿದ್ದಿದ್ದು, ಬಾಲಕನ ಮೇಲೆಯೇ ಟ್ರ್ಯಾಕ್ಟರ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೋಲಾರ ತಾಲೂಕಿನ ವೇಮಗಲ್ ಗ್ರಾಮದ ಮಂಜೇಶ್ ಹಾಗೂ ತಮ್ಮ ವಾಸು ಜೊತೆಗೆ ಬಂಗಾರಪೇಟೆಯಿಂದ ವಾಪಸ್ ಆಗುತ್ತಿರುತ್ತಾರೆ. ಈ ವೇಳೆ ಚಿಕ್ಕಪ್ಪನ ಮಡಿಲಲ್ಲಿ ಕುಳಿತಿದ್ದ ಪುತ್ರ ಮೋಹನ್ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಮಂಜೇಶ್ ಅತ್ತೆ ಮನೆಯವರು ಮನೆ ಕಟ್ಟುತ್ತಿರುವುದರಿಂದ ಮರದ ಸಾಮಾನುಗಳನ್ನ ಟ್ರ್ಯಾಕ್ಟರ್‌ನಲ್ಲಿ ಸಾಗಿಸಿ ವಾಪಸ್ ಆಗುವ ವೇಳೆ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್‌ನಲ್ಲಿ ಚಿಕ್ಕಪ್ಪನ ಮಡಿಲಲ್ಲಿ ಕುಳಿತಿದ್ದ ಬಾಲಕ ಮೋಹನ್ ರಸ್ತೆ ಮೇಲಿನ ಹಂಪ್ಸ್ ಬಳಿ ಟ್ರ್ಯಾಕ್ಟರ್‌ ಚಲಿಸುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ.

ಈ ವೇಳೆ ಬಾಲಕನ ಮೇಲೆಯೇ ಟ್ರ್ಯಾಕ್ಟರ್‌ ಹರಿದ ಪರಿಣಾಮ ಸ್ಥಳದಲ್ಲೇ ಮೋಹನ್ ಮೃತಪಟ್ಟಿದ್ದು, ಇನ್ನು ಹಂಪ್ಸ್ ಬಳಿ ಟ್ರ್ಯಾಕ್ಟರ್‌ ಅನ್ನು ವೇಗವಾಗಿ ಚಲಾಯಿಸಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಂಪ್ಸ್ ಹಾಗೂ ಚಾಲಕ ತಂದೆ ಮಂಜೇಶ್ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.

ಬಾಲಕ ಟ್ರ್ಯಾಕ್ಟರ್‌ನಿಂದ ಕೆಳಗೆ ಬೀಳುವುದು ಹಾಗೂ ಆತನ ಮೇಲೆ ಟ್ರ್ಯಾಕ್ಟರ್‌ ಹರಿಯುವ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಕೋಲಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್‌

Spread the loveಬೆಂಗಳೂರು: ದಸರಾದಲ್ಲಿ ನಂದಿಧ್ವಜ ಪೂಜೆಗೆ ಮುಖ್ಯಮಂತ್ರಿಗಳೊಂದಿಗೆ  ತೆರಳುತ್ತಿದ್ದ ಸಚಿವರನ್ನು ಎಸ್‌ಪಿ ತಡೆದಿರುವ ಘಟನೆಗೆ ಸಂಬಧಿಸಿದಂತೆ ಉಪಮುಖ್ಯಮಂತ್ರಿ ಜಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ