Breaking News

ಆರ್‌ಎಸ್‌ಎಸ್, ಹಿಂದೂ ಅಂದ್ರೆ ಪ್ರಿಯಾಂಕ್ ಖರ್ಗೆಗೆ ಅಲರ್ಜಿ – ಯತ್ನಾಳ್

Spread the love

ಬೆಂಗಳೂರು: ಆರ್‌ಎಸ್‌ಎಸ್, ಹಿಂದೂ ಅಂದ್ರೆ ಪ್ರಿಯಾಂಕ್ ಖರ್ಗೆಗೆ ಅಲರ್ಜಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಹಿತಿ ಕೊಟ್ರೆ ಅಷ್ಟೇ ಅಲ್ಲ, ಅನುಮತಿ ಕೇಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳ್ತಾರೆ. ಮೊನ್ನೆ ಈದ್ ಮಿಲಾದ್ ಆಯಿತು ಆಗ ಪರ್ಮಿಷನ್ ತೆಗೆದುಕೊಂಡ್ರಾ? ಆರ್‌ಎಸ್‌ಎಸ್ ಮತ್ತು ಹಿಂದೂ ಅಂದ್ರೆ ಖರ್ಗೆ ಅವರಿಗೆ ಅಲರ್ಜಿ. ಖರ್ಗೆ ಅವರ ಬಳಿ ಸಾಕಷ್ಟು ಹಣ ಇದೆ. ಅಧಿಕಾರ ಸಹ ಇದೆ. ವ್ಯಾಪಕವಾಗಿ ಮಾದಕ ದ್ರವ್ಯದ ಬಗ್ಗೆ ಚರ್ಚೆ ಆಗುತ್ತಿದೆ. ಮೊನ್ನೆ ಕಲಬುರಗಿಯಲ್ಲೇ ಉಗ್ರರ ಚರ್ಚೆ ಆಗಿದೆ. ಇದೆಲ್ಲಾ ಬಿಟ್ಟು ಆರ್‌ಎಸ್‌ಎಸ್ ಬಗ್ಗೆ ಚರ್ಚೆ ಮಾಡುತ್ತಾರೆ. ಆರ್‌ಎಸ್‌ಎಸ್‌ನ ಯಾವುದೇ ಕಾರ್ಯಕ್ರಮದಲ್ಲಿ ಗಲಾಟೆ, ಗಲಭೆ ಆಗಿಲ್ಲ ಎಂದು ನೀವೇ ಉತ್ತರ ಕೊಟ್ಟಿದ್ದೀರಿ. ಆದ್ರೆ ಯಾವ ಕಾರ್ಯಕ್ರಮದಲ್ಲಿ ಗಲಾಟೆ, ಗಲಭೆ ಆಗಿದೆ, ಅದರ ಬಗ್ಗೆ ಮಾತ್ರ ಕಾನೂನು ಮಾಡಲಿ, ಅದಕ್ಕೆ ನಮ್ಮ ತಕರಾರು ಇಲ್ಲ. ಬರೀ ಆರ್‌ಎಸ್‌ಎಸ್ ಅಂದ್ರೆ ಹೇಗೆ?ಆರ್‌ಎಸ್‌ಎಸ್ ಪಥಸಂಚಲನ ಮಾಡುತ್ತೆ? ನಾವೂ ಟ್ಯಾಕ್ಸ್ ತುಂಬುತ್ತೇವೆ. ತಮ್ಮ ವ್ಯಾಪ್ತಿ ಬಿಟ್ಟು ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಿಯಾಂಕ ಖರ್ಗೆ ತನ್ನ ಅಮೂಲ್ಯ ಸಮಯವನ್ನು ಆರ್‌ಎಸ್‌ಎಸ್ ವಿಷಯದಲ್ಲಿ ವ್ಯರ್ಥ ಮಾಡುತ್ತಿದ್ದಾರೆ. ಅವರು ಇನ್ನೂ ಯುವಕರು. ದೇಶದ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಅವರದು ಕೂಡ ಒಂದು. ಕಲಬುರ್ಗಿಯಯಲ್ಲಿ ಭಯೋತ್ಪಾದಕ ಕೃತ್ಯ ನಡೆಯುತ್ತಿದೆ. ಗಾಂಜಾ ಚರಸ್ ವ್ಯಾಪಕವಾಗಿದೆ. ಇವರು ಅತಿಯಾಗಿ ಮಾತನಾಡುತ್ತಿದ್ದಾರೆ. ಅತಿಯಾಗಿ ಮಾತನಾಡಿದರೆ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.

ಇದೇ ವೇಳೆ ಮೈಸೂರು ದಸರಾದಲ್ಲಿ ಸಚಿವರ ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಆ ಮಂತ್ರಿ ಸಫಾಯಿ ಕರ್ಮಚಾರಿ ಕುಟುಂಬದಿಂದ ಬಂದವರು. ಅವರಿಗೆ ಅವಮಾನ ಮಾಡಿದ್ದಾರೆ. ನಾನೇ ಹೋಗಿ ಅವರನ್ನು ಒಳಗೆ ಕರೆದುಕೊಂಡು ಬಂದೆ ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ ಇದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.

ಬರ ಪರಿಹಾರ ವಿಚಾರವಾಗಿ ಮಾತನಾಡಿ, ಸಿಎಂಗೆ ಬರದ ಬಗ್ಗೆ ಯಾವುದೇ ವಿಚಾರ ಬೇಕಿಲ್ಲ. ಸ್ಟಿಂಗ್ ಆಪರೇಷನ್‌ಗೆ ಆದ್ಯತೆ ಕೊಡ್ತಿದ್ದಾರೆ. ಗಂಭೀರವಾಗಿ ಯಾರನ್ನ ಏನು ಮಾಡಬೇಕು ಅನ್ನೋದನ್ನ ನೋಡ್ತಿದ್ದಾರೆ. ರೈತರಿಗೆ ಬೀಜ, ಗೊಬ್ಬರ ಸರಿಯಾಗಿ ಕೊಟ್ಟಿಲ್ಲ. ಅವರು ಕೇಂದ್ರದ ಮೇಲೆ ಮನವಿ ಮಾಡ್ತಿದ್ದೇವೆ ಅಂತಾರೆ. ಸರ್ವ ಪಕ್ಷ ಸಭೆ ಕರೆಯಿರಿ. ಯಾರು ಬರ್ತಾರೋ, ಬಿಡ್ತಾರೋ. ಯಾರಿಗೆ ರೈತರ ಬಗ್ಗೆ ಕಾಳಜಿ ಇದೆ, ಇಲ್ಲ ಅಂತ ಗೊತ್ತಾಗಲಿದೆ. ನಾಳೆ ಕಬ್ಬು ಬೆಳೆಗಾರರ ಸಭೆ ಸಿಎಂ ನೇತೃತ್ವದಲ್ಲಿ ನಡೆಯಲಿದೆ. ಬರಗಾಲದ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.

ನಮ್ಮ ಕಡೆ ಬಹಳ ಸಮಸ್ಯೆ ಆಗುತ್ತಿದೆ ಕೇಂದ್ರದವರಿಗೆ ಇವರು ಸರಿಯಾಗಿ ಮಾಹಿತಿ ಕೊಟ್ಟಿಲ್ಲ. ದೆಹಲಿಗೆ ಸಿಎಂ, ಡಿಸಿಎಂ ಅವರು ಹೋಗಿ ಭೇಟಿ ಮಾಡಬೇಕು ಕೇಂದ್ರಕ್ಕೆ ಒತ್ತಡ ಮಾಡಬೇಕು. ರಾಜ್ಯದಲ್ಲಿ ಇರುವ ಕೇಂದ್ರದ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಏನೂ ಮಾತಾಡೋದೇ ಇಲ್ಲ, ಸ್ಟಿಂಗ್ ವಿಚಾರವೂ ಅವರು ಮಾತನಾಡುತ್ತಿಲ್ಲ, ಬಿಜೆಪಿ ಅವರು ಸಹ ಕೇಂದ್ರಕ್ಕೆ ಮನವಿ ಮಾಡಬೇಕು, ಬೆಳೆ ನಾಶವಾಗಿದೆ, ಬೆಳೆ ಒಣಗಿ ಹೋಗಿದೆ. ಪ್ರಧಾನಿ ಮೋದಿಗೆ ಮನವಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಪೊಲೀಸರು ಅವ್ರ ಡ್ಯೂಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ: ಡಿಸಿಎಂ ರಿಯಾಕ್ಷನ್‌

Spread the loveಬೆಂಗಳೂರು: ದಸರಾದಲ್ಲಿ ನಂದಿಧ್ವಜ ಪೂಜೆಗೆ ಮುಖ್ಯಮಂತ್ರಿಗಳೊಂದಿಗೆ  ತೆರಳುತ್ತಿದ್ದ ಸಚಿವರನ್ನು ಎಸ್‌ಪಿ ತಡೆದಿರುವ ಘಟನೆಗೆ ಸಂಬಧಿಸಿದಂತೆ ಉಪಮುಖ್ಯಮಂತ್ರಿ ಜಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ