Breaking News

ಪವಿತ್ರಾ ಗೌಡಗೆ ಬಿಗ್‌ಡೇ – ಬ್ಯಾರಕ್ ಬದಲಾವಣೆ ಬಗ್ಗೆ ಇಂದು ಕೋರ್ಟ್ ನಿರ್ಧಾರ

Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ) ಇದ್ದ ಬ್ಯಾರಕ್ ಬದಲಾವಣೆ ವಿಚಾರವಾಗಿ ಇಂದು ನ್ಯಾಯಾಲಯ (Court) ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಬ್ಯಾರಕ್ ಬದಲಾವಣೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದೆ.

ಮಹಿಳಾ ಬ್ಯಾರಕ್‌ಗಳನ್ನು ಪರಿಶೀಲಿಸಲು ನ್ಯಾಯಾಧೀಶರೇ ಜೈಲಿಗೆ ಭೇಟಿ ನೀಡಬೇಕು ಎಂದು ಪವಿತ್ರಾ ಗೌಡ ಪರ ವಕೀಲರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆಯೂ ನ್ಯಾಯಾಲಯ ಇಂದು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಬ್ಯಾರಕ್ ಬದಲಾವಣೆಗೆ ಪವಿತ್ರಾ ಗೌಡ ಮನವಿ
ಪವಿತ್ರಾ ಗೌಡ ಅವರು ಮಹಿಳಾ ಬ್ಯಾರಕ್‌ಗಳ ಪರಿಶೀಲನೆ ನಡೆಸುವಂತೆ ಅಕ್ಟೋಬರ್ 13ರಂದು ಅರ್ಜಿ ಸಲ್ಲಿಸಿದ್ದರು. ಬ್ಯಾರಕ್ ಬದಲಾವಣೆ ಮಾಡುವಂತೆ ಪದೇಪದೇ ಮನವಿ ಮಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಅಳಲು.

ಬ್ಯಾರಕ್‌ನಲ್ಲಿರುವ ವಿದೇಶಿ ಕೈದಿಗಳು ಮಧ್ಯರಾತ್ರಿವರೆಗೂ ನಿದ್ದೆ ಮಾಡಲು ಬಿಡುತ್ತಿಲ್ಲ. ತಮ್ಮ ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಮಾತನಾಡಲು ಹೋದರೆ ಗಲಾಟೆ ಮಾಡುತ್ತಿದ್ದಾರೆ ಎಂದು ಪವಿತ್ರಾ ಗೌಡನಿಂದ ಆರೋಪ ಕೇಳಿಬಂದಿತ್ತು.

ಬ್ಯಾರಕ್‌ನಲ್ಲಿ 30 ಮಹಿಳಾ ಕೈದಿಗಳು
ಸದ್ಯ ಪವಿತ್ರಾ ಗೌಡ ಇರುವ ಬ್ಯಾರಕ್‌ನಲ್ಲಿ ಸುಮಾರು 30 ಮಹಿಳಾ ಕೈದಿಗಳಿದ್ದಾರೆ. ಅವರಲ್ಲಿ ನಾಲ್ಕರಿಂದ ಐದು ಮಂದಿ ವಿದೇಶಿ ಪ್ರಜೆಗಳಿದ್ದಾರೆ. ಅವರ ವರ್ತನೆಯಿಂದ ತೊಂದರೆಯಾಗುತ್ತಿದೆ, ಆರೋಗ್ಯದಲ್ಲೂ ಏರುಪೇರಾಗಿದೆ ಎಂದು ಪವಿತ್ರಾ ಗೌಡ ತಿಳಿಸಿದ್ದು, ಈ ಸಂಬಂಧ ವೈದ್ಯಕೀಯ ವರದಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ಹಿಂದೆಯೇ ಪವಿತ್ರಾ ಗೌಡ ಇದ್ದ ಬ್ಯಾರಕ್ ಬದಲಾವಣೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಜೈಲಾಧಿಕಾರಿಗಳು ಬ್ಯಾರಕ್ ಬದಲಾವಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾರಕ್ ಬದಲಾವಣೆ ಮಾಡದಿರುವುದಕ್ಕೆ ಕಾರಣವೇನು ಎಂದು ನ್ಯಾಯಾಲಯ ವರದಿ ಕೇಳಿತ್ತು. ಇದೀಗ ಜೈಲಾಧಿಕಾರಿಗಳು ಶಿಫ್ಟಿಂಗ್ ವಿಚಾರವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿರುವ 59ನೇ ಸಿಸಿಹೆಚ್ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದ್ದು, ಇಂದು ಬ್ಯಾರಕ್ ಬದಲಾವಣೆ ಹಾಗೂ ನ್ಯಾಯಾಧೀಶರ ಜೈಲು ಪರಿಶೀಲನೆ ಕುರಿತಂತೆ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.


Spread the love

About Laxminews 24x7

Check Also

ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ತಮ್ಮ ತಂದೆಯಿಂದ ತಿಳಿದುಕೊಳ್ಳಲಿ: ಛಲವಾದಿ ತಿರುಗೇಟು

Spread the loveಬೆಂಗಳೂರು: ಆರ್‌ಎಸ್‌ಎಸ್ (RSS) ಬಗ್ಗೆ ಪ್ರಿಯಾಂಕ್ ಖರ್ಗೆ  ಅವರು ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ತಿಳಿದುಕೊಳ್ಳಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ