Breaking News
Home / ಜಿಲ್ಲೆ / ಯಮಕನಮರಡಿ: ಕ್ಷೇತ್ರ ವ್ಯಾಪ್ತಿಯಲ್ಲಿ ಇಂದೂ ಕೂಡ ಠಿಕಾಣಿ ಹೂಡಿದ್ದಾರೆಶಾಸಕ‌ ಸತೀಶ ಜಾರಕಿಹೊಳಿ

ಯಮಕನಮರಡಿ: ಕ್ಷೇತ್ರ ವ್ಯಾಪ್ತಿಯಲ್ಲಿ ಇಂದೂ ಕೂಡ ಠಿಕಾಣಿ ಹೂಡಿದ್ದಾರೆಶಾಸಕ‌ ಸತೀಶ ಜಾರಕಿಹೊಳಿ

Spread the love

ಯಮಕನಮರಡಿ: ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ಮಾರಣಾಂತಿಕ ಸೊಂಕು ಹರಡದಂತೆ ಭಾರೀ ಮುನ್ನೆಚ್ಚರಿಕೆ ಕ್ರಮ ಮತ್ತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಶಾಸಕ‌ ಸತೀಶ ಜಾರಕಿಹೊಳಿ ಇಂದೂ ಕೂಡ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ.

ಇಲ್ಲಿನ‌ ಪಾಶ್ಚಾಪೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಾದ್ಯಂತ ಇಂದು ಸಂಚರಿಸಿ ಮಾಸ್ಕ ವಿತರಣೆ ಮಾಡಿ ಜನರಿಗೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ಮನವಿ‌ ಮಾಡಿದರು.

ಜನರಿಗೆ ದಿನನಿತ್ಯದ ಸರಕುಗಳ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸೂಚನೆ‌ ನೀಡಿದರು.

ಕ್ಷೇತ್ರದ ಮಾವನೂರ ಮತ್ತು ಫತೆಪುರ ಗ್ರಾಮಗಳಲ್ಲಿ ಸಾಮಾಜಿಕ‌ ಅಂತರ ಕಾಯ್ದುಕೊಂಡು ಮಾಸ್ಕ್ ವಿತರಿಸಿದ ಶಾಸಕರು ಜನರಲ್ಲಿ‌ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.


Spread the love

About Laxminews 24x7

Check Also

ಕರ್ನಾಟಕ ವಿಧಾನಸಭಾ ಚುನಾವಣೆ : ಮೇ. 10 ರಂದು ಎಲ್ಲಾ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

Spread the love ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ( Karnataka Assembly Election 2023 ) ದಿನಾಂಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ