Breaking News
Home / ಜಿಲ್ಲೆ / ‘ಸಂಕ್ರಾಂತಿ’ ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಇದೆ.

‘ಸಂಕ್ರಾಂತಿ’ ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಇದೆ.

Spread the love

ಇಂದಿನ ಜಗತ್ತಿನಲ್ಲಿ ನಿಜವಾದ ಸ್ನೇಹ ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮಿಯತೆ ಮಾಯವಾಗಿದೆ. ಮೊಬೈಲ್‌ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜೊತೆಗೆ ಮಾತನಾಡುವುದು ಕಡಿಮೆ ಆಗಿದೆ. ಟಿವಿ ಪರದೆಯ ಮೇಲೆ ಬರುವ ನೆಚ್ಚಿನ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆಯೇ ಹೊರತು ಅತಿಥಿಗಳ ಸತ್ಕಾರ ಮಾಡಲು ಜನರಿಗೆ ಸಮಯದ ಅಭಾವವಿದೆ. ಈ ದೃಶ್ಯಗಳು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಕಾಣುತ್ತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ನಮ್ಮ ಪೂರ್ವಜರು ಹಬ್ಬಗಳ ಆಚರಣೆಗೆ ಮಹತ್ವ ನೀಡುತ್ತಾ ಬಂದಿದ್ದಾರೆ.

ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ‘ಸಂಕ್ರಾಂತಿ’ ಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಇದೆ. ಈ ಹಬ್ಬವು ಪ್ರತಿ ವರ್ಷ ಜನವರಿ ಮಾಸದಂದು ದಿನಾಂಕ ೧೪/೧೫ ಕ್ಕೆ ಬರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಓರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪ.ಬಂಗಾಳದಲ್ಲಿ ಈ ಹಬ್ಬವನ್ನು ‘ಮಕರ ಸಂಕ್ರಾಂತಿ’ ಅಥವಾ ‘ಸಂಕ್ರಾಂತಿ’, ಎಂದು ಕರೆಯುತ್ತಾರೆ.

ತಮಿಳುನಾಡಿನಲ್ಲಿ ‘ಪೊಂಗಲ್’ (ಹೊಸ ವರ್ಷದ ಹಬ್ಬ) ಎಂದು ಕರೆಯುತ್ತಾರೆ. ರಾಜಸ್ಥಾನ, ಗುಜರಾತ್‌ದಲ್ಲಿ ’ಉತ್ತರಾಯಣ’ ಎಂದು ಕರೆಯುತ್ತಾರೆ. ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬ್‌ದಲ್ಲಿ ’ಮಾಘಿ’ ಎಂದು ಕರೆಯುತ್ತಾರೆ. ಅಸ್ಸಾಂನಲ್ಲಿ ’ಮಾಘ ಬಿಹು’, ಕಾಶ್ಮೀರದಲ್ಲಿ ’ಶಿಶುರ ಸೇಂಕ್ರಾತ’ ಶಬರಿಮಲೈ ಬೆಟ್ಟದಲ್ಲಿ ’ಮಕರ ವಿಲಕ್ಕು’ ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ ’ಮಾಘಿ’, ಬರ್ಮಾದಲ್ಲಿ ’ಥಿಂಗ್ಯಾನ’, ಕಾಂಬೋಡಿಯಾದಲ್ಲಿ ’ಮೊಹಸಂಗ್ರನ’, ಥೈಲಾಂಡ್‌ನಲ್ಲಿ ’ಸಂಗ್ರಾನ’ ಎಂದು ಕರೆಯಲಾಗುತ್ತದೆ.

ಈ ಹಬ್ಬದ ಮೊದಲನೆ ದಿನ ‘ಭೋಗಿ’, ಎರಡನೇ ದಿನ ‘ಕರಿ’ ಎಂದು ಹೇಳಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ ‘ಮಕರ ಸಂಕ್ರಾಂತಿ’. ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ, ಸಂಕ್ರಾಂತಿಗೆ ಸೂರ್ಯನನ್ನು ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿ ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಮಹಾರಾಜ ಸಾಗರನ ೬೦,೦೦೦ ಮಕ್ಕಳಿಗೆ ಮುಕ್ತಿ ಸಿಕ್ಕಿರುವ ದಿನವು ಇದೇ ಆಗಿದೆ. ಆದ್ದರಿಂದ ಗಂಗಾಸಾಗರ ಮೇಳ ನಡೆಯುತ್ತದೆ. ಮಹಾಭಾರತದ ಇಚ್ಛಾ ಮರಣಿ ಭೀಷ್ಮಪಿತನು ದೇಹ ತ್ಯಜಿಸಿದ ದಿನವು ಸಂಕ್ರಾಂತಿ ಎಂದು ಹೇಳಲಾಗುತ್ತದೆ.


Spread the love

About Laxminews 24x7

Check Also

SSLC ಪರೀಕ್ಷೆ -2 ವಿಜ್ಞಾನ ವಿಷಯದ ಕೀ ಉತ್ತರ ಪ್ರಕಟ: ಆಕ್ಷೇಪಣೆಗಳಿದ್ದರೆ ಈ ವೆಬ್ ಸೈಟ್ ಗೆ ಭೇಟಿ ನೀಡಿ

Spread the love ಬೆಂಗಳೂರು: 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2 ವಿಜ್ಞಾನ ವಿಷಯದ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ