Breaking News

ಉತ್ತಮ ಸಮಾಜ ಕಟ್ಟುವಲ್ಲಿ “ಲಕ್ಷ್ಮೀ ನ್ಯೂಸ್” ಪ್ರಮುಖ ಪಾತ್ರ ವಹಿಸಲಿ:ಶಾಸಕ ರಮೇಶ ಜಾರಕಿಹೊಳಿ

Spread the love

ಉತ್ತಮ ಸಮಾಜ ಕಟ್ಟುವಲ್ಲಿ “ಲಕ್ಷ್ಮೀ ನ್ಯೂಸ್” ಪ್ರಮುಖ ಪಾತ್ರ ವಹಿಸಲಿ:ಶಾಸಕ ರಮೇಶ ಜಾರಕಿಹೊಳಿ

ಸಾಮಾಜಿಕ ಪರಿವರ್ತನೆಯಲ್ಲಿ ಪತ್ರಿಕೆಗಳ ಪಾತ್ರ ಅಪಾರ/ಉತ್ತಮ ಸಮಾಜ ಕಟ್ಟುವ ಕೆಲಸ “ಲಕ್ಷ್ಮೀ ನ್ಯೂಸ್” ಮಾಡಲಿ/ನೂತನವಾಗಿ ಪ್ರಾರಂಭವಾದ “ಲಕ್ಷ್ಮೀ ನ್ಯೂಸ್” ಗೆ ಶುಭ ಹಾರೈಸಿದ ಶಾಸಕರು.


ಸಾಮಾಜಿಕ ಪರಿವರ್ತನೆ ಜತೆಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ.ಆದ್ದರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಗೋಕಾಕ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರು ರಮೇಶ ಜಾರಕಿಹೊಳಿ ಅವರು ಹಾರೈಸಿದರು.

ಜನೆವರಿ 1.2020 ರಿಂದ ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ (ವೆಬ್ ಪೇಜ್) ತಂಡದ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸೋಮವಾರ ದಂದು ಅವರ ಕಚೇರಿಗೆ ಭೇಟಿ ನೀಡಿದ “ಲಕ್ಷ್ಮೀ ನ್ಯೂಸ್” ಕಾರ್ಯಕಾರಿ ಮಂಡಳಿಯ ಮುಖಂಡರು ಶಾಸಕರಿಗೆ ಸವಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಿದರು.

“ಲಕ್ಷ್ಮೀ ನ್ಯೂಸ್” ತಂಡದ ವತಿಯಿಂದ ಸನ್ಮಾನ ಸ್ವೀಕರಿಸಿದ ನಂತರ ಲಕ್ಷ್ಮೀ ನ್ಯೂಸ್ ನೊಂದಿಗೆ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು ಸಾಮಾಜಿಕ ಕಳಕಳಿ ಇಟ್ಟುಕೊಂಡು ನೂತನವಾಗಿ ಪ್ರಾರಂಭವಾದ ಲಕ್ಷ್ಮೀ ನ್ಯೂಸ್ ಗೆ ಶುಭ ಹಾರೈಸಿದರು. ಹಾಗೂ ಸಾಮಾಜಿಕ ಪರಿವರ್ತನೆ ಜತೆಗೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ.ಆದ್ದರಿಂದ ನೂತನವಾಗಿ ಪ್ರಾರಂಭವಾದ “ಲಕ್ಷ್ಮೀ ನ್ಯೂಸ್” ಉತ್ತಮ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ