ಹುಬ್ಬಳ್ಳಿ: ರಷ್ಯಾದ ಪ್ರಸಿದ್ಧ ಹಠಯೋಗಿಣಿ ಮೊಲ್ಗಾ ಅವರಿಗೆ ವಾರಾಣಸಿಯ ಕಾಶಿ ಜ್ಞಾನ ಪೀಠದಲ್ಲಿ ಶಿವಯೋಗ ದೀಕ್ಷೆ ನೀಡಲಾಯಿತು.
ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಮೊಲ್ಗಾ ಅವರಿಗೆ ಶಿವಯೋಗ ದೀಕ್ಷೆ ನೀಡಿ ಆಶೀರ್ವದಿಸಿದರು.
ಶಿವಯೋಗವು ಬಾಹ್ಯ ಆಚರಣೆಗಳನ್ನು ಆಂತರಿಕ ಅನುಭಾವವಾಗಿ ಪರಿವರ್ತಿಸುವ ಮಹಾಸಾಧನವಾಗಿದ್ದು, ಆತ್ಮಜ್ಞಾನ ಹಾಗೂ ಪರಮಶಿವನ ಸಾನ್ನಿಧ್ಯದ ಅನುಭೂತಿಗೆ ಕರೆದೊಯ್ಯುವ ಶ್ರೇಷ್ಠ ಸಾಧನಾ ಪಥವಾಗಿದೆ ಎಂದು ಜಗದ್ಗುರುಗಳು ಹೇಳಿದರು.
ಪ್ರಾತಃಕಾಲ ನಡೆದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಲ್ಗಾ ಅವರಿಗೆ ಶಿವಪಂಚಾಕ್ಷರಿ ಮಹಾಮಂತ್ರದೊಂದಿಗೆ ಶಿವಯೋಗ ದೀಕ್ಷೆ ನೀಡಲಾಯಿತು. ಭಾರತೀಯ ಪರಂಪರೆಯಂತೆ ಅವರಿಗೆ ‘ಹಠಯೋಗಿಣಿ ಮಾನಸಿದೇವಿ’ ಎಂದು ಮರುನಾಮಕರಣ ಮಾಡಲಾಯಿತು.
ದೀಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ಮಾನಸಿದೇವಿ, ಕಾಶಿ ಜಗದ್ಗುರುಗಳ ತಪೋಹಸ್ತದಿಂದ ದೊರೆತ ಶಿವಯೋಗ ದೀಕ್ಷೆ ತಮ್ಮ ಹಠಯೋಗ ಸಾಧನಾ ಪಥಕ್ಕೆ ವಿಶಿಷ್ಟ ಪ್ರೇರಣೆಯ ಬೆಳಕು ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಹಾಗೂ ಶಿವಾಚಾರ್ಯ ಸ್ವಾಮೀಜಿಗಳು ಭಾಗವಹಿಸಿದ್ದರು.
Laxmi News 24×7