Breaking News

Bro Wait, ಭಾರತ್ ಮಾತಾ ಕಿ ಜೈ ಶುರು ಮಾಡೋಣ – ರಾಗಾ ಪಿತೃಪ್ರಧಾನ ವ್ಯವಸ್ಥೆ ಹೇಳಿಕೆಗೆ ಕಂಗನಾ ತಿರುಗೇಟು

Spread the love

ನವದೆಹಲಿ: ಕೃತಿ ಸನೋನ್‌ಗೆ ಸಾಥ್ ನೀಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಇದೀಗ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.

ಮಹಿಳೆಯರ ಸಮಸ್ಯೆಗಳ ವಿಚಾರದಲ್ಲಿ ಕಾಂಗ್ರೆಸ್‌ನ ಧೋರಣೆಯನ್ನು ಪ್ರಶ್ನಿಸಿ ಬಿಜೆಪಿ ಹಾಕಿದ್ದ ಪೋಸ್ಟ್ ಅನ್ನು ಕಂಗನಾ ಬೆಂಬಲಿಸಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರ `ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗೊಳಿಸಿ’ ಎನ್ನುವ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯವರ ಸಂದೇಶಕ್ಕೆ ತಿರುಗೇಟು ನೀಡುತ್ತಾ, “ಬ್ರೋ, ವೇಟ್. ಭಾರತ್ ಮಾತಾ ಕಿ ಜೈ ಶುರು ಕರ್ತೆ ಹೈ” ಎಂದು ಬರೆದುಕೊಂಡಿದ್ದಾರೆ. ಬಿಜೆಪಿಯ ಈ ಪೋಸ್ಟ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಕ್ ಮತ್ತು ಶಾ ಬಾನೋ ಪ್ರಕರಣ ಸೇರಿದಂತೆ ಹಲವು ವಿಷಯಗಳಲ್ಲಿ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸಲಾಗಿದೆ.

ಪೋಸ್ಟ್‌ನಲ್ಲಿ ಏನಿದೆ?
ಬಿಜೆಪಿಯ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ `ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗೊಳಿಸಿ’ ಎಂದು ಹೇಳುವಂತೆ ಚಿತ್ರಿಸಲಾಗಿದೆ. ಅದಕ್ಕೆ ಮಹಿಳೆಯೊಬ್ಬರು `ಬ್ರೋ, ವೇಟ್. ಭಾರತ್ ಮಾತಾ ಕಿ ಜೈ. ಶುರು ಮಾಡೋಣ’ ಎಂದು ಉತ್ತರಿಸುತ್ತಾರೆ. ನಂತರ ಆ ಮಹಿಳೆ `ತ್ರಿವಳಿ ತಲಾಕ್?’ ಎಂದು ಕೇಳಿದಾಗ, ರಾಹುಲ್ ಗಾಂಧಿ ಅರೆ, ಅದು ಸಂಪೂರ್ಣ ಮತ ಬ್ಯಾಂಕ್ ರಾಜಕೀಯವಾಗಿತ್ತು, ಆದರೂ ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗೊಳಿಸಿ ಎಂದು ಉತ್ತರಿಸುತ್ತಾರೆ. ಅದಕ್ಕೆ ಮಹಿಳೆ, ಆದರೆ ನಿಮ್ಮ ಪಕ್ಷವು ಆರಂಭದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ವಿರುದ್ಧ ಮತಹಾಕಿತ್ತು ಎಂದು ಕೇಳಿದರು. ಅದಕ್ಕೆ ರಾಹುಲ್ ಗಾಂಧಿ ಮತ್ತೆ ಅದೇ ಸಂಪೂರ್ಣ ಮತ ಬ್ಯಾಂಕ್ ಗೇಮ್ ಬ್ರೋ, ಆದರೆ ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗೊಳಿಸಿ ಎನ್ನುತ್ತಾರೆ.

ಮತ್ತೊಂದು ಫೋಟೋದಲ್ಲಿ ರಾಹುಲ್ ಗಾಂಧಿ `ಗೂಡನ್ನು ಒಡೆದುಹಾಕಿ’ ಎಂದರೆ, ಮಹಿಳೆ “ಶಾ ಬಾನೋ?” ಎಂದು ಪ್ರಶ್ನಿಸುತ್ತಾರೆ. ಕೊನೆಯ ಚಿತ್ರದಲ್ಲಿ ಕರ್ನಾಟಕ ಸಂಪುಟದ ಮಹಿಳಾ ಪ್ರತಿನಿಧಿತ್ವದ ಬಗ್ಗೆ ಪ್ರಸ್ತಾಪಿಸಿ, ನಿಮ್ಮ ಕರ್ನಾಟಕ ಸಂಪುಟದಲ್ಲಿ 33 ಮಂತ್ರಿಗಳಿದ್ದಾರೆ, ಆದರೆ ಒಬ್ಬರೂ ಮಹಿಳೆಯಿಲ್ಲ ಎಂದು ಕೇಳುತ್ತಾರೆ. ಅದಕ್ಕೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪಿತೃಪ್ರಧಾನ ವ್ಯವಸ್ಥೆ ಮತ್ತು ಮಹಿಳಾ ಹಕ್ಕುಗಳ ಕುರಿತು ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ. ಕಳೆದ ವಾರ `ಛಾತ್ರೋನ್ ಕಿ ಗೂಂಜ್’ ಎಂಬ ವಿದ್ಯಾರ್ಥಿನಿಯರ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಮನುಸ್ಮೃತಿ ಮನಸ್ಥಿತಿಯನ್ನು ಟೀಕಿಸಿದ್ದರು. ಅಲ್ಲದೆ, ವಿದ್ಯಾರ್ಥಿನಿಯರು ಪಿತೃಪ್ರಧಾನತೆಯನ್ನು ಧ್ವಂಸಗೊಳಿಸಿ ಎಂದು ಕರೆ ನೀಡಿದ್ದರು. ಮಹಿಳೆಯರು ತಮ್ಮ ತಂದೆ, ಗಂಡಂದಿರು ಅಥವಾ ಗಂಡುಮಕ್ಕಳಿಗೆ ಸೇರಿದವರಲ್ಲ, ಅವರು ಸ್ವತಃ ತಮಗೇ ಸೇರಿದವರು ಎಂದು ರಾಹುಲ್ ಗಾಂಧಿ ಸಂವಾದದ ವೇಳೆ ಹೇಳಿದ್ದರು. ಜೀವನದ ವಿವಿಧ ಹಂತಗಳಲ್ಲಿ ಮಹಿಳೆಯರು ಪುರುಷ ಸಂಬಂಧಿಗಳ ಅಧಿಕಾರದಡಿಯಲ್ಲಿ ಇರಬೇಕು ಎಂಬ ಕಲ್ಪನೆಯನ್ನೂ ಅವರು ಕಟುವಾಗಿ ಟೀಕಿಸಿದ್ದರು.

ಇನ್ನೂ ಬ್ರ್ಯಾಂಡ್‌ವೊಂದರ ಜಾಹೀರಾತಿನಲ್ಲಿ ಧರಿಸಿದ್ದ ಬಟ್ಟೆಯಿಂದಾಗಿ ನೆಟ್ಟಿಗರ ಟೀಕೆಗೆ ಒಳಗಾಗಿದ್ದ ನಟಿ ಕೃತಿ ಸನೋನ್‌ಗೆ  ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ  ಸಾಥ್ ನೀಡಿದ್ದರು. ಮಹಿಳೆಯೊಬ್ಬಳು ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಆಕೆಯ ಸ್ವಾತಂತ್ರ್ಯವನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದರು.


Spread the love

About Laxminews 24x7

Check Also

ನಮ್ಮ ಧರ್ಮದ ಬಗ್ಗೆ ನಾವೇ ತೀರ್ಮಾನಿಸುತ್ತೇವೆ, ಹಿಜಾಬ್‌ ಆದೇಶ ಇಸ್ಲಾಂ ಮೇಲಿನ ನೇರ ದಾಳಿ – ಹೈಕೋರ್ಟ್ ತೀರ್ಪಿಗೆ ಓವೈಸಿ ಕಿಡಿ

Spread the loveಹೈದರಾಬಾದ್: ಶಾಲೆಯಲ್ಲಿ ಹಿಜಾಬ್  ಧರಿಸಲು ಅನುಮತಿ ಕೋರಿ ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್‌ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ