ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ – ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಹೊಸ ದಾಖಲೆ

Spread the love

ಬೆಳಗಾವಿ: ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ  ಹೊಸ ದಾಖಲೆ ನಿರ್ಮಿಸಿದೆ.

ಬೆಳಗಾವಿಯ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಇ , ಬಿಟೆಕ್  ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಪ್ರಕಟಿಸಿದೆ. 

ಬಿಇ, ಬಿಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳ ಹಾಜರಾಗಿದ್ದರು. ಇಂದು (ಮೇ 22) ಸಂಜೆ 5:30ಕ್ಕೆ ಪರೀಕ್ಷೆ ಅಂತ್ಯವಾಗಿದ್ದು, 5:40ಕ್ಕೆ ಫಲಿತಾಂಶ ಪ್ರಕಟವಾಗಿದ್ದು, ವಿವಿಯು ಶೇ.99.98ರಷ್ಟು ಫಲಿತಾಂಶ ಸಾಧಿಸಿದೆ.

ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸುವುದರ ಜೊತೆಗೆ ವಿದ್ಯಾರ್ಥಿಗಳ ಮೊಬೈಲ್‌ನ ವಾಟ್ಸಪ್ ಸಂಖ್ಯೆಗೂ ಫಲಿತಾಂಶವನ್ನು ರವಾನಿಸಲಾಗಿದೆ. ಮೌಲ್ಯಮಾಪನದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿ ವಿಟಿಯು ಈ ಸಾಧನೆ ಮಾಡಿದೆ. ತ್ವರಿತ ಫಲಿತಾಂಶ ಪ್ರಕಟನೆಗೆ ಶ್ರಮಿಸಿದ ಸಿಬ್ಬಂದಿಗೆ ವಿಸಿ ಪ್ರೊ.ವಿದ್ಯಾಶಂಕರ ಅವರು ಅಭಿನಂದಿಸಿದ್ದಾರೆ.


Spread the love

About Laxminews 24x7

Check Also

ಹುಕ್ಕೇರಿ ಸಮಗ್ರ ನೀರಾವರಿ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ

Spread the loveಹುಕ್ಕೇರಿ: ಐದು ದಶಕಗಳಿಂದ ಕತ್ತಿ ಮನೆತನಕ್ಕೆ ಹುಕ್ಕೇರಿ ತಾಲೂಕಿನ ಜನರು ಆಶೀರ್ವದಿಸಿ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ