Breaking News

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ? ಇಲ್ಲಿದೆ ಲಿಸ್ಟ್‌

Spread the love

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಂಪುಟದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆಶಿ, ಡಿಸಿಎಂ ಡಾ.ಜಿ ಪರಮೇಶ್ವರ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ತಮ್ಮೊಂದಿಗೆ ಬುಧವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ 13 ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಿದ್ದಾರೆ.

ಈ ಮೂಲಕ ಹಣಕಾಸು, ಗೃಹ, ಕಂದಾಯ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಿಎಂ ಡಿಕೆ ಶಿವಕುಮಾರ್‌ ಹಣಕಾಸು ಖಾತೆಯನ್ನ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ ಖಾತೆಯನ್ನೂ ತಾವೇ ಇಟ್ಟುಕೊಂಡಿದ್ದಾರೆ.

ಕರ್ನಾಟಕದ ನೂತನ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ (ಅವರಿಗೆ ಕಂದಾಯ ಮತ್ತು ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿ ಕೊಡಲಾಗಿದೆ. ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ. ಡಿಕೆ ಶಿವಕುಮಾರ್‌ ಸಂಪುಟದ ಮತ್ತೋರ್ವ ಪ್ರಮುಖ ಸಚಿವ ಕೆ.ಜೆ ಜಾರ್ಜ್‌ ಅವರಿಗೆ ಇಂಧನ ಮತ್ತು ಪ್ರವಾಸೋದ್ಯಮ ಖಾತೆ ನೀಡಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಭೈರತಿ ಸುರೇಶ್‌ ಅವರಿಗೆ ಸಾರಿಗೆ ಇಲಾಖೆ ನೀಡಲಾಗಿದೆ.

ಇನ್ನು ಅತ್ಯಂತ ಪ್ರಮುಖವಾಗಿ ಕರ್ನಾಟಕದ ನೂತನ ಗೃಹ ಸಚಿವರಾಗಿ ಪ್ರಿಯಾಂಕ್‌ ಖರ್ಗೆ ಆಯ್ಕೆಯಾಗಿದ್ದು, ಅವರಿಗೆ ಐಟಿಬಿಟಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ನಗರಾಭಿವೃದ್ಧಿ ಖಾತೆಯನ್ನು ನೀಡಲಾಗಿದೆ. ಆದ್ರೆ ಬೆಂಗಳೂರು ನಗರಾಭಿವೃದ್ಧಿ ಕೇಳಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆ ಇಲಾಖೆ ನೀಡಲಾಗಿದೆ.

10427

ಯಾರಿಗೆ ಯಾವ ಖಾತೆ?

* ಡಿಕೆ ಶಿವಕುಮಾರ್ – ಮುಖ್ಯಮಂತ್ರಿ – ಹಣಕಾಸು, ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ
* ಡಾ. ಜಿ ಪರಮೇಶ್ವರ – ಉಪಮುಖ್ಯಮಂತ್ರಿ – ಕಂದಾಯ, ಯುವ ಸಬಲೀಕರಣ
* ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ದಿ
* ಪ್ರಿಯಾಂಕ್ ಖರ್ಗೆ – ಗೃಹ, ಐಟಿಬಿಟಿ
* ಡಾ.ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ, ಹಿಂದುಳಿದ ಕಲ್ಯಾಣ
* ಯು.ಟಿ ಖಾದರ್ – ಆರೋಗ್ಯ
* ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
* ಎಂ.ಬಿ ಪಾಟೀಲ್ – ಬೃಹತ್ ಕೈಗಾರಿಕೆ
* ಕೆ.ಜೆ ಜಾರ್ಜ್ – ಇಂಧನ, ಪ್ರವಾಸೋದ್ಯಮ
* ಕೆ.ಎಚ್ ಮುನಿಯಪ್ಪ – ಆಹಾರ
* ರಾಮಲಿಂಗಾ ರೆಡ್ಡಿ – ಜಲಸಂಪನ್ಮೂಲ
* ಈಶ್ವರ್ ಖಂಡ್ರೆ – ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ
* ಬೈರತಿ ಸುರೇಶ್ – ಸಾರಿಗೆ
* ಡಾ.ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ


Spread the love

About Laxminews 24x7

Check Also

ಕೊಲ್ಹಾಪುರದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅಪರೂಪದ 17 ಗಂಟೆಗಳ ‘ಬ್ರೈನ್ ಬೈಪಾಸ್’ ಶಸ್ತ್ರಚಿಕಿತ್ಸೆ ಯಶಸ್ವಿ,ಪ್ರಖ್ಯಾತ ನರಶಸ್ತ್ರಚಿಕಿತ್ಸಕ ಡಾ. ಶಿವಶಂಕರ ಮರಜಕ್ಕೆ ಮತ್ತು ತಂಡದ ಐತಿಹಾಸಿಕ ಸಾಧನೆ

Spread the love ಕೊಲ್ಹಾಪುರ:ವೈದ್ಯಕೀಯ ಲೋಕವೇ ಬೆರಗಾಗುವಂತಹ ಅಪರೂಪದ ಮತ್ತು ಅತ್ಯಂತ ಸಂಕೀರ್ಣವಾದ ಬ್ರೈನ್ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ