Breaking News

ಎರಡನೇ ದಿನವೂ ಮುಂದುವರೆದ ನೀಲಣ್ಣವರ ಇಡಿ ತಪಾಸಣೆ!!!

Spread the love

• ಶಿವಾನಂದ ನೀಲಣ್ಣವರ ಮನೆಯಲ್ಲಿ ಇಡಿ ತಪಾಸಣೆ
• ಬೆಳಗಾವಿಯಲ್ಲಿ 2ನೇ ದಿನವೂ ಇಡಿ ಶೋಧ
• ಶಿವಬಸವ ನಗರದ ಎಂಎಚ್ ಟವರ್‌ನಲ್ಲಿ ಪರಿಶೀಲನೆ
• ಸಿಆರ್‌ಪಿಎಫ್ ಬಿಗಿ ಭದ್ರತೆಯಲ್ಲಿ ಅಧಿಕಾರಿಗಳ ಪರಿಶೀಲನೆ
ಆಂಕರ್: ಬೆಳಗಾವಿಯ ಉದ್ಯಮಿ ಶಿವಾನಂದ ನೀಲಣ್ಣವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಡಿ ಇಡಿ ಎಫ್‌ಐಆರ್ ದಾಖಲಿಸಿದ್ದು,, ನಿನ್ನೆಯಿಂದಲೇ ಪರಿಶೀಲನೆ ನಡೆಸುತ್ತಿರುವ ಇಡಿ ತಂಡವು ಇಂದು ಸಹ ಶೋಧ ಕಾರ್ಯ ಚುರುಕುಗೊಳಿಸಿದೆ.
ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಂ.ಎಚ್. ಟವರ್‌ನಲ್ಲಿರುವ ಶಿವಾನಂದ ನೀಲಣ್ಣವರ ನಿವಾಸದಲ್ಲಿಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಎರಡನೇ ದಿನವೂ ಮುಂದುವರಿದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎಫ್‌ಐಆರ್ ದಾಖಲಿಸಿದ ಬಳಿಕ ಗೋವಾ ಹಾಗೂ ಮಂಗಳೂರು ಮೂಲದ ಇಡಿ ಅಧಿಕಾರಿಗಳ ತಂಡ ದಾಖಲೆಗಳ ಸುದೀರ್ಘ ಪರಿಶೀಲನೆ ನಡೆಸುತ್ತಿದೆ. ಸಿಆರ್‌ಪಿಎಫ್ ತುಕಡಿಯ ಬಿಗಿ ಭದ್ರತೆಯೊಂದಿಗೆ ಕಾರ್ಯಚರಣೆ ಸಾಗುತ್ತಿದ್ದು, ಆದರೇ ಈ ವೇಳೆ ಶಿವಾನಂದ ನೀಲಣ್ಣವರ ಕಾಣಿಸಿಕೊಂಡಿಲ್ಲ. ಹೀಗಾಗಿ ಅಧಿಕಾರಿಗಳು ಅವರ ಪತ್ನಿ ಹಾಗೂ ಸಹೋದರನನ್ನು ಸ್ಥಳಕ್ಕೆ ಕರೆತಂದು ಅವರ ಸಮ್ಮುಖದಲ್ಲೇ ಮಹತ್ವದ ದಾಖಲೆಗಳನ್ನು ಜಾಲಾಡುತ್ತಿದ್ದಾರೆ ಎನ್ನಲಾಗಿದೆ.

Spread the love

About Laxminews 24x7

Check Also

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಖತರ್ನಾಕ್ ದಂಪತಿ ಬಂಧನ

Spread the love ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು ಎಂದು ಜನರನ್ನು ನಂಬಿಸಿ, ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ