Breaking News

SIR ವೇಳೆ ಮ್ಯಾಪಿಂಗ್ ಆಗದ 43.84 ಲಕ್ಷ ಮತದಾರರಿಗೆ ನೋಟಿಸ್

Spread the love

ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಐಆರ್ ಮೊದಲ ಹಂತ ಮುಕ್ತಾಯ ಆಗಿದೆ. ಈಗ ಮತ್ತೊಂದು ಹಂತದ ಪ್ರಕ್ರಿಯೆಗೆ ಮುಂದಾಗಿದ್ದು, ಮ್ಯಾಪಿಂಗ್ ಆಗದ ಗೊಂದಲಮಯ ಆಗಿರುವ ಮತದಾರರಿಗೆ ನೋಟಿಸ್ ನೀಡಲಿದ್ದಾರೆ.

ಒಟ್ಟು 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ ಅಂತಾ ಗುರುತು ಮಾಡಲಾಗಿದ್ದು, ಈ ಪೈಕಿ 43,84 ಲಕ್ಷ ಮತದಾರರಿಗೆ ನೋಟಿಸ್ ಬರಲಿದೆ. ಈ ಮತದಾರರು ಗುರತು, ಪೌರತ್ವ ಮತ್ತು ಜನ್ಮದಿನಾಂಕ ಸಾಬೀತುಪಡಿಸಬೇಕಿದೆ. 43.84 ಲಕ್ಷ ಮತದಾರರ ಪೈಕಿ 23.45 ಲಕ್ಷ ಮತದಾರರು ಮ್ಯಾಪಿಂಗ್ ಲಭ್ಯವಿಲ್ಲ. ಜೊತೆಗೆ ಗೊಂದಲಮಯವಾಗಿರುವ 20.35 ಲಕ್ಷ ಮತದಾರರಿಗೆ ಕೂಡ ನೋಟಿಸ್ ಬರಲಿದೆ. 

ನೋಟಿಸ್‌ಗೆ ಉತ್ತರ ಕೊಟ್ಟು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಜೊತೆಗೆ ಫಾರಂ 6 ಅಡಿ ಕೂಡ ಹೆಸರು ಸೇರ್ಪಡೆಗೆ ಮಾಡಿಕೊಳ್ಳಬಹುದು. ಮನೆ ಮನೆ ಪರಿಶೀಲನೆ ಬಳಿಕ 4.46 ಕೋಟಿ ಮತದಾರರ ಹೆಸರು ಮತದಾರರು ಕರಡು ಪಟ್ಟಿಯಲ್ಲಿ ಪ್ರಕಟ ಆಗಲಿದೆ. ಬೆಂಗಳೂರಿನ 1.03 ಕೋಟಿ ಮತದಾರರ ಪೈಕಿ 56 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟ ಆಗಲಿದೆ. ಉಳಿದದ್ದು ಎಎಸ್‌ಡಿಡಿಒ ಅಂತಾ ಗುರುತು ಮಾಡಲಾಗಿದೆ. 23 ಲಕ್ಷ ಮತದಾರರಿಗೆ ನೋಟಿಸ್ ಕೊಡುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ಸಚಿವ ಸಂಪುಟ ಶಿಫಾರಸು

Spread the loveಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ