Breaking News

ಕೊಡೋದಕ್ಕೆ ಹಣ ಇಲ್ಲ, ಸಿಎಂ ಪುಗ್ಸಟ್ಟೆ ಘೋಷಣೆ ಮಾಡ್ಕೊಂಡು ಹೊರಟಿದ್ದಾರೆ: ವಿಜಯೇಂದ್ರ ಕಿಡಿ

Spread the love

ಬೆಂಗಳೂರು: ಸಿಎಂ ಕೇವಲ ಪುಗ್ಸಟ್ಟೆ ಘೋಷಣೆ ಮಾಡಿಕೊಂಡು ಹೊರಟಿದ್ದಾರೆ, ಕೊಡೋದಕ್ಕೆ ಸರ್ಕಾರದ ಹತ್ತಿರ ಹಣ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕರಾವಳಿಗೆ ಹೋಗಿ 32-35 ಸಾವಿರ ಕೋಟಿ ರೂ. ಅನೌನ್ಸ್ ಮಾಡಿದ್ದಾರೆ. ಎಲ್ಲಿಂದ ತರುತ್ತಾರೆ ದುಡ್ಡನ್ನು? ರಿಯಲ್ ಎಸ್ಟೇಟ್ ಕಂಪನಿಯಿಂದ ತರುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಅಧಿವೇಶನ ಕರೆದಿರುವುದರ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಅವರ ಪಕ್ಷದ ಶಾಸಕರೇ ಈಗ ಇದನ್ನು ವಿರೋಧಿಸಿ ವಾಸ್ತವ ತೋರಿಸುತ್ತಿದ್ದಾರೆ. ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಸದನ ಕರೆದು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಅವರು ಪಾದಯಾತ್ರೆ ಮಾಡದಿದ್ದರೆ ವಿಶೇಷ ಅಧಿವೇಶನವನ್ನೇ ಇವರು ಕರೆಯುತ್ತಿರಲಿಲ್ಲ, ಮಂಗಳೂರಿನಲ್ಲಿ ಮೀನು ಹಿಡಿದುಕೊಂಡು ಕೂರುತ್ತಿದ್ದರು ಎಂದು ಕಿಡಿಕಾರಿದ್ದಾರೆ.

ಹೆಚ್.ಕೆ. ಪಾಟೀಲ್ ಅವರು ಹಿರಿಯ ಶಾಸಕರು, ಅವರೇ ಪಕ್ಷದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮುದ್ದೇಬಿಹಾಳ ಶಾಸಕರು ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ. ಜೆಡಿಎಸ್ ಶಾಸಕರು ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ 44 ಕ್ಷೇತ್ರದಲ್ಲಿ ಕೇವಲ 23 ತಾಲೂಕುಗಳನ್ನು ಮಾತ್ರ ಘೋಷಣೆ ಮಾಡಿದ್ದಾರೆ, ಇದು ರಾಜಕಾರಣ ಅಲ್ಲವಾ? ಕೂಡಲೇ ಶಿವಮೊಗ್ಗ, ಶಿಕಾರಿಪುರ ಸೇರಿದಂತೆ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನೀರಿನ ಕೊರತೆ, ವಿದ್ಯುತ್ ಅಭಾವದಿಂದ ರೈತರಿಗೆ ಗಂಭೀರ ಸಮಸ್ಯೆಯಿದೆ. ಯಡಿಯೂರಪ್ಪ ಅವರು ವಿದ್ಯುತ್ ಅಭಾವವಿದ್ದಾಗ ಬೇರೆ ರಾಜ್ಯದಿಂದ ತರಿಸಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ರೈತರನ್ನು ನಡುಬೀದಿಯಲ್ಲಿ ತಂದು ನಿಲ್ಲಿಸಿದೆ. ರೈತರ ಪರವಾಗಿ ಕಳಕಳಿ ಇದ್ದರೆ ನೀವು ಎಷ್ಟು ಖರ್ಚಿನಲ್ಲಿ ವಿದ್ಯುತ್ ಖರೀದಿ ಮಾಡುತ್ತೀರೋ ಗೊತ್ತಿಲ್ಲ. ನಿಮ್ಮ ಬಳಿ ದುಡ್ಡು ಇದೆಯೋ ಇಲ್ಲವೋ ಗೊತ್ತಿಲ್ಲ. ನೀವು ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿದ್ದೀರಾ, ಆ ಕನಸು ಹಾಗೇ ಇರಲಿ, ಯಾಕೆಂದರೆ ಮುಂದೆ ಜನ ನಿರ್ಧಾರ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕೆಎಸ್‍ಆರ್‌ಟಿಸಿ ಎಂಡಿ ಪತ್ರ ಬರೆದಿದ್ದಾರೆ, ಸರ್ಕಾರಕ್ಕೆ 6 ಸಾವಿರ ಕೋಟಿ ರೂ. ಪೆಂಡಿಂಗ್ ಇದೆ. ನಮ್ಮ ನೌಕರರಿಗೆ ಸಂಬಳ ಕೊಡೋಕೆ ಆಗುತ್ತಿಲ್ಲ, ಎಲ್ಲಾ ಬಸ್‍ಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಇದೆ ಅಂತಾ ಪತ್ರ ಬರೆದಿದ್ದಾರೆ. ಆದರೆ, ರಾಜ್ಯ ಸರ್ಕಾರ ಇನ್ನೂ ಉತ್ತರ ಕೊಟ್ಟಿಲ್ಲ. ಒಂದು ವರ್ಷಕ್ಕೆ ಬರಬೇಕಾದ ಶೂ, ಸಾಕ್ಸ್‌ಗಳು ಒಂದು ತಿಂಗಳು ಬರ್ತಿಲ್ಲ. ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಪುಗ್ಸಟ್ಟೆ ಮಾತನಾಡುತ್ತಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ