Breaking News
Home / ಅಂತರಾಷ್ಟ್ರೀಯ / ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

Spread the love

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಜಂಬೂಸವಾರಿ ಮೆರವಣಿಗೆ ನಡೆಯುತ್ತಿದ್ದ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಆಗಿದ್ರೆ ಕೊರೊನಾ ದಸರಾ ಜಂಬೂಸವಾರಿ ಹೇಗಿರುತ್ತೇ ಅನ್ನೋ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಕೊರೊನಾ ನಡುವೆ ಜಂಬೂ ಸವಾರಿ ಮೆರವಣಿಗೆ!
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಆಚರಣೆಗೆ ಮಾತ್ರ ಜಂಬೂಸವಾರಿ ಸೀಮಿತವಾಗಿದೆ. ಕೇವಲ ಅರಮನೆಯ ಆವರಣದಲ್ಲಿ ಮಾತ್ರ ಮೆರವಣಿಗೆ ಸಾಗಲಿದೆ.

ಹೇಗಿರುತ್ತೆ ದಸರಾ ಜಂಬೂಸವಾರಿ?
ಪ್ರತಿವರ್ಷ ಅರಮನೆಯಿಂದ ಆರಂಭವಾಗುತ್ತಿದ್ದ ಜಂಬೂಸವಾರಿ ಸುಮಾರು 5 ಕಿಲೋ‌ ಮೀಟರ್ ವರೆಗೂ ಸಾಗಿ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಕೊನೆಯಾಗುತ್ತಿತ್ತು.

ಈ ಬಾರಿ ಅದು ಕೇವಲ 450 ಮೀಟರ್‌ಗೆ ಸೀಮಿತವಾಗಿದೆ. ಇನ್ನು ಪ್ರತಿ ಬಾರಿ ದಸರೆಯ ಪ್ರಮುಖ ಆಕರ್ಷಣೆ ಅಂದ್ರೆ ಅದು ಗಜಪಡೆಯ ಜಂಬೂಸವಾರಿ. ಪ್ರತಿ ವರ್ಷ 12 ರಿಂದ 13 ಆನೆಗಳು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದವು.

ಆದರೆ ಈ ಬಾರಿ ಕೇವಲ‌ 5 ಆನೆಗಳು ಮಾತ್ರ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿವೆ. ಜಂಬೂಸವಾರಿ ವೀಕ್ಷಣಗೆ ಹೊರ ರಾಜ್ಯಗಳಿಂದ, ದೇಶ ವಿದೇಶಗಳ ಪ್ರವಾಸಿಗರಿಗೆ ಪ್ರವೇಶವಿಲ್ಲ. ಅರಮನೆಯಲ್ಲಿ ನಡೆಯುವ ಜಂಬೂಸವಾರಿ ವೀಕ್ಷಿಸಲು 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದವರು ಕೇವಲ ಸಾಮಾಜಿಕ‌ ಜಾಲತಾಣ ಹಾಗೂ ಮಾಧ್ಯಮದ‌ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಕಲಾ ತಂಡಗಳಿಗೂ ಬ್ರೇಕ್, ಸ್ತಬ್ಧ ಚಿತ್ರಗಳಿಗೂ ಇಲ್ಲ ಅವಕಾಶ
ಜಂಬೂಸವಾರಿ ಅಂದ್ರೆ ಅಲ್ಲಿ ಕಲಾ ತಂಡಗಳ ಮೆರಗು ಮೇಳೈಸುತ್ತಿತ್ತು. ಆದ್ರೆ ಈ ಬಾರಿ ಜಂಬೂಸವಾರಿ ಮೆರವಣಿಗೆ ಕಳೆಗುಂದಲಿದೆ.

ಕಲಾ ತಂಡ, ಸ್ತಬ್ಧಚಿತ್ರಕ್ಕೂ ಬ್ರೇಕ್:
ಈ ಬಾರಿ ಕಲಾತಂಡಗಳ ಬೆಳವಣಿಗೆಗೂ ಬ್ರೇಕ್ ಬಿದ್ದಿದೆ. ಕೇವಲ 6 ಕಲಾ ತಂಡಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲ ಈ ಬಾರಿ ಕೇವಲ ಕೊರೊನಾ ಜಾಗೃತಿಯ ಒಂದು ಸ್ತಬ್ಧಚಿತ್ರ ಮಾತ್ರ ಮೆರವಣಿಗೆಯಲ್ಲಿ ಇರಲಿದೆ. ಇದೆಲ್ಲದರ ನಡುವೆ ಜಂಬೂಸವಾರಿ ಪ್ರಮುಖ‌ ಆಕರ್ಷಣೆ ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆ ಸಹಾ ಬದಲಾಗಿದೆ. ಇದೇ ಮೊದಲ ಬಾರಿಗೆ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಇಷ್ಟು ವರ್ಷ ಅಂಬಾರಿ ನೇತೃತ್ವ ವಹಿಸಿದ್ದ ಅರ್ಜುನ ಆನೆಗೆ 60 ವರ್ಷ ಆದ ಹಿನ್ನೆಲೆಯಲ್ಲಿ ಅಂಬಾರಿ ಜವಾಬ್ದಾರಿ ಅಭಿಮನ್ಯು ಹೆಗಲೇರಿದೆ. ಇನ್ನು ಅರ್ಜುನ ಸೇರಿ ಹಲವು ದಸರಾ ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿಲ್ಲ.

ಇದಿಷ್ಟೇ ಅಲ್ಲ ಈ ಬಾರಿಯ ದಸರೆಯಲ್ಲಿ ಆಕರ್ಷಕ ಪಥಸಂಚಲನ, ವಿವಿಧ ಕಸರತ್ತು ಪ್ರದರ್ಶನ. ಮೇಯರ್ ಕುದುರೆ ಸವಾರಿ ಸೇರಿದಂತೆ ಹಲವು ಆಚರಣೆಗೆ ಬ್ರೇಕ್ ಬಿದ್ದಿದೆ. ಇದೆಲ್ಲಾ ಕಾರಣಗಳಿಂದ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಸಂಪೂರ್ಣವಾಗಿ ಕಳೆಗುಂದಿದೆ.

 

 

 

 


Spread the love

About Laxminews 24x7

Check Also

ಕಾಂಗ್ರೆಸ್‌ಗೆ ಆರೋಗ್ಯವೇ ಆಘಾತಕಾರಿ: ಆಜಾದ್ ರಾಜೀನಾಮೆ ಬಗ್ಗೆ ಬಿಜೆಪಿ ವ್ಯಂಗ್ಯ

Spread the love ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ