Breaking News

ಮಗುವಿನೊಂದಿಗೆ ಬ್ಯೂಟಿ ಪಾರ್ಲರ್‌ಗೆ ಹೋದ ತಾಯಿ ನಾಪತ್ತೆ

Spread the love

ಬೆಳಗಾವಿ: ಬೆಳಗಾವಿ ನಗರದ ಅನಗೋಳ ಲೋಹಾರಗಲ್ಲಿಯ ನಿವಾಸಿ ಮಂಜುಳಾ ರಾಮಲಿಂಗ ಸುಣಗಾರ (27) ಅವರು ತಮ್ಮ 14 ತಿಂಗಳ ಮಗ ಆರ್ಯನ ರಾಮಲಿಂಗ ಸುಣಗಾರನೊಂದಿಗೆ ಸೆ.18ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.

ಮಂಜುಳಾ ಅವರು ಮಗನನ್ನು ಕರೆದುಕೊಂಡು ಲಕ್ಷ್ಮೀಗಲ್ಲಿಯಲ್ಲಿರುವ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುತ್ತೇನೆ ಎಂದು ಕುಟುಂಬದವರಿಗೆ ತಿಳಿಸಿ ಮನೆಯಿಂದ ತೆರಳಿದ್ದರು. ಆದರೆ ಬಳಿಕ ಮನೆಗೆ ಮರಳದೇ ಇರುವ ಹಿನ್ನೆಲೆಯಲ್ಲಿ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಮಂಜುಳಾ ಅವರು ಸುಮಾರು 4.2 ಅಡಿ ಎತ್ತರ, ದುಂಡು ಮುಖ, ಗುಂಡು ಮೂಗು, ಗೋದಿಗೆಂಪು ಮೈಬಣ್ಣ ಹಾಗೂ ಕಪ್ಪು ಕೂದಲು ಹೊಂದಿದ್ದು, ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ. ನಾಪತ್ತೆಯಾಗುವ ವೇಳೆ ಕೆಂಪು ಬಣ್ಣದ ಚೂಡಿ ಟಾಪ್, ಕಪ್ಪು ಪ್ಯಾಂಟ್ ಹಾಗೂ ಬಿಳಿ ದುಪ್ಪಟ್ಟಾ ಧರಿಸಿದ್ದರು.

ಮಗ ಆರ್ಯನ ಸುಮಾರು 2 ಅಡಿ ಎತ್ತರ, ದುಂಡು ಮುಖ, ಗುಂಡು ಮೂಗು, ಗೋದಿಗೆಂಪು ಮೈಬಣ್ಣ ಹಾಗೂ ಕಪ್ಪು ಕೂದಲು ಹೊಂದಿದ್ದು, ಕಪ್ಪು ಟೀ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದನು.

ಈ ಚಹರೆಯ ಮಹಿಳೆ ಮತ್ತು ಮಗುವಿನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಿಲಕವಾಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ

Spread the loveಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ. ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ