Breaking News

ಮೊಜ್ತಬಾ ಖಮೇನಿ 90% ಗಾನ್‌ – ಸಂಚಲನ ಸೃಷ್ಟಿಸಿದ ಟ್ರಂಪ್‌ ಹೇಳಿಕೆ

Spread the love

ಟೆಹ್ರಾನ್:‌ ಅಮೆರಿಕ – ಇರಾನ್‌ ನಡುವಿನ ಯುದ್ಧದ ಸನ್ನಿವೇಶ ತೀವ್ರಗೊಂಡಿರುವ ಹೊತ್ತಿನಲ್ಲೇ ಇರಾನ್‌ನ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ 90% ಗಾನ್‌ ಎನ್ನುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಮಾಧ್ಯಮವೊಂದಕ್ಕೆ ನೀಡ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್‌, ಇರಾನ್ ತನ್ನ ನೌಕಾಪಡೆ, ವಾಯುಪಡೆ, ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಉನ್ನತ ಮಿಲಿಟರಿ ಕಮಾಂಡರ್‌ಗಳನ್ನ ಕಳೆದುಕೊಂಡಿದೆ. ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ 90% ಗಾನ್‌ ಆಗಿದ್ದಾರೆ. ಸಂಘರ್ಷದ ಸಮಯದಲ್ಲಿ ಇರಾನ್‌ನ ಮಿಲಿಟರಿ  ಸಾಮರ್ಥ್ಯಗಳು ತೀವ್ರವಾಗಿ ದುರ್ಬಲಗೊಂಡಿವೆ. ಅವರ ಬಳಿ ಇನ್ನೇನೂ ಉಳಿದಿಲ್ಲ ಎಂದು ಹೇಳಿದ್ದಾರೆ.

ಟಾಪ್‌ ಲೀಡರ್‌ಗಳೇ ಇಲ್ಲ
ಇರಾನ್‌ನ ಟಾಪ್‌ ಲೀಡರ್‌ಗಳು ಕೊಲ್ಲಲ್ಪಟ್ಟಿದ್ದಾರೆ, ಆಯತೊಲ್ಲಾ ಅಲಿ ಖಮೇನಿ ಅವರ ಮಗ ಮೊಜ್ತಬಾ ಖಮೇನಿ 90% ಗಾನ್‌ ಆಗಿದ್ದಾರೆ. ವೈಮಾನಿಕ ದಾಳಿಯಲ್ಲಿ ಉಂಟಾದ ಗಾಯಗಳಿಂದ ಮೊಜ್ತಬಾ ಖಮೇನಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ತಿಂಗಳು ಇರಾನ್ ಮತ್ತು ಇರಾಕ್‌ನಲ್ಲಿ ನಡೆದ ಅವರ ತಂದೆಯ ಅಂತ್ಯಕ್ರಿಯೆ ಸಮಾರಂಭಗಳಿಗೂ ಅವರು ಗೈರಾಗಿದ್ದರು ಎಂದು ಟ್ರಂಪ್‌ ಹೇಳಿದ್ದಾರೆ.

ಟ್ರಂಪ್‌ ಅವರ ಹೇಳಿಕೆ ಮೊಜ್ತಬಾ ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರಾ ಅನ್ನೋದ್ರ ಬಗ್ಗೆ ಸಂಶಯ ಮೂಡಿಸಿದೆ.


Spread the love

About Laxminews 24x7

Check Also

ಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆಟೌನ್‌ಶಿಪ್ ಗಲಾಟೆಯಿಂದ ಸರ್ವೆ ಕಾರ್ಯ ಸ್ಥಗಿತ, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ: ಎಸ್ಪಿ ಶ್ರೀನಿವಾಸ್ ಗೌಡ ಎಚ್ಚರಿಕೆ

Spread the loveರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಗಲಾಟೆ ಬಳಿಕ ಇಂದಿನ ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ