Breaking News

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡನ ಶವ ಅನುಮಾನಾಸ್ಪದವಾಗಿ ಪತ್ತೆ

Spread the love

ಚಿತ್ರದುರ್ಗ: ಜನಪರ ಕೆಲಸ ಮಾಡುತ್ತಾ ಭಾರೀ ಹೆಸರು ಮಾಡಿದ್ದ ಕಾಂಗ್ರೆಸ್‌ನ  ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) ಅವರ ಶವ ಅನುಮಾನಾಸ್ಪದವಾಗಿ ಚಿತ್ರದುರ್ಗದ  ರಾಷ್ಟ್ರೀಯ ಹೆದ್ದಾರಿ 48ರ ಬಳಿ ಪತ್ತೆಯಾಗಿದೆ.

ಚಿತ್ರದುರ್ಗದಲ್ಲಿ ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ಶಿವಲಿಂಗಪ್ಪ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಸಂಬಂಧಿಗಳು, ಸ್ನೇಹಿತರು ಹಾಗೂ ನೆಂಟರಿಷ್ಟರ ಮನೆಗಳಲ್ಲಿ ವಿಚಾರಿಸಿದರೂ ಶಿವಲಿಂಗಪ್ಪ ಪತ್ತೆಯಾಗಿರಲಿಲ್ಲ. ಅವರ ಸೋದರ ಅಳಿಯ ಬಸವರಾಜ್ ಚಿತ್ರದುರ್ಗದ ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಕಳೆದ ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ನಗರದ ಮಹೇಶ್ವರಿ ಲೇಔಟ್ ಇರುವ ಬಗ್ಗೆ ಅವರ ಮೊಬೈಲ್ ಲೊಕೇಶನ್ ಪೊಲೀಸರಿಗೆ ಮಾಹಿತಿ ನೀಡಿತ್ತು. ಅವರ ಮೊಬೈಲ್ ಸ್ವಿಚ್ಡ್ ಆಫ್ ಆದ‌ ಸ್ಥಳದಲ್ಲೇ ಶವವಾಗಿ ಪತ್ತೆಯಾಗಿರೋದು ‌ಅವರ ಕುಟುಂಬಸ್ಥರಲ್ಲಿ‌ ಬಾರೀ ಅನುಮಾನಕ್ಕೆ ಕಾರಣವಾಗಿದೆ. ಅವರ ಮುಖ ಗುರುತು ಸಿಗದ ಸ್ಥಿತಿಯಲ್ಲಿದ್ದು, ಸಂಪೂರ್ಣ ದೇಹ ಕೊಳೆತ ಸ್ಥಿತಿಯಲ್ಲಿತ್ತು.

ಶವವನ್ನು ನೋಡಿದ ಬಳಿಕ ಅವರ ಸೋದರಳಿಯ ಬಸವರಾಜ್ ಸೇರಿದಂತೆ ಇತರ ಸಂಬಂಧಿಕರೆಲ್ಲರೂ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸೂಕ್ತ, ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ನಗರದ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ ಆವರಣದಲ್ಲಿ ಚಾಲನೆ

Spread the loveಬೆಳಗಾವಿ : ಜಿಲ್ಲೆಯಾದ್ಯಂತ ‘ಸ್ವಚ್ಛ ಶನಿವಾರ’ ಅಭಿಯಾನಕ್ಕೆ ಜಿಪಂ, ತಾಪಂ ಹಾಗೂ ಗ್ರಾಪಂ ವ್ಯಾಪ್ತಿಯ ವಿವಿಧ ಇಲಾಖೆಯ ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ