Breaking News

ಲೋಕ ಅದಾಲತ್ ಸದುಪಯೋಗವಾಗಲಿ

Spread the love

ಕಾಗವಾಡ: ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜು.೧೧ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಕಕ್ಷಿದಾರರು ಮತ್ತು ಸಾರ್ವಜನಿಕರು ಇದರ ಲಾಭ ಪಡದುಕೊಳ್ಳಬೇಕು ಎಂದು ನ್ಯಾಯಾಧೀಶೆ ರೂಪಾ ಚಿನಿವಾರ ತಿಳಿಸಿದರು.
ತಾಲೂಕು ನ್ಯಾಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೋಕ್ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ೧,೦೪೦ ಸಿವಿಲ್ ಮತ್ತು ಸುಮಾರು ೧,೬೦೦ ಕ್ರಿಮಿನಲ್ ದಾವೆಗಳಿದ್ದು, ಕಕ್ಷಿದಾರರಿಗೆ ರಾಜಿ ಸಂಧಾನ ಮಾಡಿಕೊಳ್ಳಲು ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪ ತಹಸೀಲ್ದಾರ್ ವಿಜಯಕುಮಾರ ಚೌಗುಲೆ, ಎಎಸ್‌ಐ ಎಸ್.ವಿ.ಹಂಜಿ, ಉಗಾರ ಪುರಸಭೆ ಮತ್ತು ಐನಾಪುರ ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಸಿಡಿಪಿಒ ರವೀಂದ್ರ ಗುದಿಗೆಣ್ಣವರ, ಆರ್.ಬಿ.ದರೂರ, ಬಿ.ವಿಜಯಕುಮಾರ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ.ನಾಂದ್ರೆ, ಕಾರ್ಯದರ್ಶಿ ಎಂ.ಜಿ.ವಡ್ಡರ, ಬಿ.ಜೆ.ಮೋಳೆ, ವೈ.ಎ.ಡಾಂಗೆ, ಎ.ಬಿ.ಪಾಟೀಲ, ಎಸ್.ಜೆ.ಚೌಗುಲೆ, ಪಿ.ಎಂ.ಮಕಾನದಾರ್ ಇತರರಿದ್ದರು.

Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ