Breaking News

ಬೆಳಗಾವಿ GTTC ಡಿಪ್ಲೋಮಾ ಪ್ರವೇಶಕ್ಕೆ ಮೇ 10 ಕೊನೆಯ ದಿನ

Spread the love

ತಾಂತ್ರಿಕ ಶಿಕ್ಷಣದ ಸುವರ್ಣ ಅವಕಾಶ ಬಳಸಿಕೊಳ್ಳಲು ಪ್ರಾಚಾರ್ಯ ಯಲ್ಲಪ್ಪ ಸವದತ್ತಿ ಕರೆ

ಜಿಟಿಟಿಸಿ ಡಿಪ್ಲೋಮಾ ಪ್ರವೇಶಕ್ಕೆ ಮುಹೂರ್ತ ಫಿಕ್ಸ್

ಮೇ 10ರ ಒಳಗೆ ಅರ್ಜಿ ಸಲ್ಲಿಸಿ

ಜಪಾನ್ ಅಮೇರಿಕಾದಿಂದ ಜಿಟಿಟಿಸಿಗೆ ಪ್ರೋತ್ಸಾಹ

ಸ್ಮಾರ್ಟ್ ಸಿಟಿಯಿಂದ ಹೈಟೆಕ್ ಸೌಲಭ್ಯಗಳ ಕೊಡುಗೆ

ಬೆಳಗಾವಿಯ ಉದ್ಯಮಬಾಗದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಡಿಪ್ಲೋಮಾ ಪ್ರವೇಶ ಪ್ರಾರಂಭವಾಗಿದ್ದು ಮೇ.10ರ ವರಗೆ ಕೊನೆಯ ದಿನಾಂಕವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಯಲ್ಲಪ್ಪ ಸವದತ್ತಿ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಪಾನ್ ಹಾಗೂ ಅಮೇರಿಕಾದದಲ್ಲಿ ನಮ್ಮ ಜಿಟಿಟಿಸಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪಾಸ್ ಆದ ಮಕ್ಕಳಿಗೆ ಇದೊಂದು ಸುವರ್ಣ ಅವಕಾಶ ಇದೆ. ಆಸಕ್ತರು ಬೇಗ ಬೇಗ ಪ್ರವೇಶ ಪಡೆದುಕೊಳ್ಳಬೇಕು ಎಂದರು. ಇ.ಡಿಎಮ್, ಕೋ-ಆಕ್ಟಿನೇಟ್ ಮೆಜರಿಂಗ್ (CMM) ಸಿ. ಎಮ್. ಎಮ್. ಮಷಿನ್‌ಗಳನ್ನು ಹೊಂದಿರುತ್ತದೆ.
ಬೆಳಗಾವಿ ಸ್ಮಾರ್ಟ್ ಸಿಟಿಯಿಂದ 3ಡಿ ಪ್ರಿಂಟರ್ ಮೇಟಲ್ ಮತ್ತು 3ಡಿ ಪ್ರಿಂಟರ್ ಪ್ಲಾಸ್ಟಿಕ, ರೋಬೋಟಿಕ್ಲ, ಪವರ ಎಲೆಕ್ಟ್ರಾನಿಕ್ ಮಷೀನ್ ಗಳನ್ನು ನೀಡಿದೆ ಎಂದರು.

ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಮತ್ತು ಔದ್ಯೋಗಿಕ ಜಗತ್ತಿಗೆ ತಕ್ಕಂತೆ ಸಜ್ಜುಗೊಳಿಸುವ ಉದ್ದೇಶ ಕೇಂದ್ರವಾಗಿದೆ. ಉತ್ಕೃಷ್ಟ ಕೇಂದ್ರದ ಸ್ಥಾನಮಾನದಿಂದಾಗಿ ತರಬೇತಿ ಪ್ರಕ್ರಿಯೆಯು ಮತ್ತಷ್ಟು ಉನ್ನತ ಮಟ್ಟಕ್ಕೇರಲಿದೆ ಎಂದರು.
ರಾಜಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ