Breaking News
Home / ಜಿಲ್ಲೆ / ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Spread the love

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ಹುತಾತ್ಮರ ದಿನ’ ದ ಕಾಯ೯ಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುತಾತ್ಮಾ ವೃತ್ತದಲ್ಲಿಯೇ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಿಟ್ಟು ಬರಲು ತೆರಳಿದ್ದಾರೆ. ಮಹಾರಾಷ್ಟ್ರದ ಸಚಿವ ಕಾಯ೯ಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎನ್ನುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಬೆಳಗಾವಿ ಪೊಲೀಸರು ಬೆಳಿಗ್ಗೆಯಿಂದ ರಾಷ್ಟ್ರೀಯ ಮಹಾಮಾಗ೯ದಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.

ನಗರ ಹೊರವಲಯದ ಸುತಗಟ್ಟಿ ಬಳಿ ಎಸಿಪಿ ನಾರಾಯಣ ಭರಮಣಿ ಮತ್ತು ಇನ್ಸ್ ಪೆಕ್ಟರ್ ಗಡ್ಡೇಕರ ವಾಹನಗಳ ತಪಾಸಣೆ ನಡೆಸುತ್ತಿದ್ದರೆ, ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಅವರು ಕೊಗನೊಳ್ಳಿ ಚೆಕ್ ಪೋಸ್ಸ್ ನಲ್ಲಿ ತಪಾಸಣೆ ನಡೆಸುತ್ತಿದ್ದರು. ಸಕಾ೯ರಿ ಕಾರ್ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣಿಸುವ ಮೂಲಕ ಸಚಿವ ರಾಜೇಂದ್ರ ಪಾಟೀಲ, ಪೊಲೀಸರ ಕಣ್ಣು ತಪ್ಪಿಸಿ ಬೆಳಗಾವಿ ನಗರದಲ್ಲಿ ದಾಖಲಾಗಿದ್ದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸಕಾ೯ರ ಅಧಿಕಾರಕ್ಕೆ ಬಂದ ನಂತರ, ಗಡಿಭಾಗದಲ್ಲಿ ಮಹಾರಾಷ್ಟ್ರ ನಾಯಕರ ಉಪಟಳ ಹೆಚ್ಚಾಗಿದ್ದು, ಅವರು ನೀಡುವ ಪ್ರಚೋದನಕಾರಿ ಹೇಳಿಕೆಗಳಿಂದ ಗಡಿಭಾಗದಲ್ಲಿ ಶಾಂತಿ ಕದಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸರು ಮಹಾರಾಷ್ಟ್ರದ ನಾಯಕರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

ಒಕ್ಕಟ್ಟು ಪ್ರದಶಿ೯ಸಿದ ಎಂಇಎಸ್ ನಾಯಕರು:

ಬೆಳಿಗ್ಗೆ ಹುತಾತ್ಮಾ ವೃತ್ತದಲ್ಲಿ ನಡೆದ ಕಾಯ೯ಕ್ರಮದಲ್ಲಿ ಎರಡೂ ಎಂಇಎಸ್ ಬಣಗಳ ನಾಯಕರಾದ ಕಿರಣ ಠಾಕೂರ, ದೀಪಕ ದಳವಿ, ಮಾಲೋಜಿರಾವ ಅಷ್ಠೇಕರ ಸೇರಿದಂತೆ ಇತರೆ ನಾಯಕರು ಭಾಗವಹಿಸಿ ಒಕ್ಕಟ್ಟು ಪ್ರದಶಿ೯ಸಿದರು. ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಈ ನಾಯಕರು ಸ್ವಯಂಸ್ಫೂತಿ೯ಯಿಂದ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ ಎನ್ನುವುದು ವಿಶೇಷ.

ಕಿರಣ ಠಾಕೂರ ಮಾತನಾಡಿ, ಗಡಿವಿವಾದಕ್ಕಾಗಿ ಪ್ರಾಣತೆತ್ತಿರುವ ಒಂಭತ್ತು ಹುತಾತ್ಮರ ಬಲಿದಾನ ವ್ಯಥ೯ ಹೋಗಬಾರದು. ಮಹಾರಾಷ್ಟ್ರದಲ್ಲಿ ಇಂದು ಶಿವಸೇನೆ ನೇತೃತ್ವದ ಸಕಾ೯ರವಿದೆ. ಎನ್.ಸಿ.ಪಿ ಸಕಾ೯ರದಲ್ಲಿ ಪಾಲುದಾರವಾಗಿದೆ. ಎರಡೂ ಪಕ್ಷಗಳ ಮುಖ್ಯಸ್ಥರಾದ ಉದ್ಧವ ಠಾಕ್ರೆ ಮತ್ತು ಶರದ ಪವಾರ ಮೊದಲಿನಿಂದಲೂ ಗಡಿವಿವಾದದ ಕುರಿತ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಆದ್ದರಿಂದ ಇನ್ನು ಮುಂದೆ ವಿಳಂಬ ಸಲ್ಲದು. ಗಡಿವಿವಾದ ಫಾಸ್ಟ್ ಟ್ರ್ಯಾಕ್ ನಲ್ಲಿ ಬಗೆಹರಿಯಬೇಕು, ಎಂದರು.

ಮುಂದೆ ಮಾತನಾಡಿದ ಅವರು, ಗಡಿವಿವಾದ ಮುಖ್ಯವಾಗಿ ಲೋಕಸಭೆಯಲ್ಲಿ ಬಗೆಹರಿಯಬೇಕು. ಹಾಗೆ ಆಗದ ಕಾರಣ ೨೦೦೪ ರಲ್ಲಿ ಮಹಾರಾಷ್ಟ್ರ ಸಕಾ೯ರ ಸುಪ್ರೀಂ ಕೋಟ್೯ ಮೆಟ್ಟಿಲೇರಿದೆ. ಈಗಲೂ ಕೂಡ ಲೋಕಸಭೆಯಲ್ಲಿ ವಿವಾದ ಬಗೆಹರಿಸಬಹುದು. ಮಹಾರಾಷ್ಟ್ರದ ೪೮ ಲೋಕಸಭಾ ಸದಸ್ಯರು ಮತ್ತು ರಾಜ್ಯ ಸಭಾ ಸದಸ್ಯರು ಇದಕ್ಕೆ ಮುಂದಾಗಬೇಕು. ಈಗಾಗಲೇ ೬೪ ವಷ೯ ಕಳೆದಿವೆ. ಸುಪ್ರೀಂ ಕೋಟಿ೯ನ ನೆಪ ಹೇಳಿ ಇನ್ನೆಷ್ಟು ವಷ೯ ಕಳೆಯುವುದು. ಸುಪ್ರೀಂ ಕೋಟಿ೯ನ ನಿಣ೯ಯದ ತನಕ ಕಾಯಬೇಕಾದರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲಿ. ಆಗ ಕನಾ೯ಟಕ ಪೊಲೀಸರದ್ದು ಏನೂ ನಡೆಯುವುದಿಲ್ಲ, ಎಂದು ಹೇಳಿದರು.

ಮಾಲೋಜಿರಾವ ಅಷ್ಟೇಕರ ಮಾತನಾಡಿ ಮಹಾರಾಷ್ಟ್ರದ ನಾಯಕರ ಮೇಲೆ ಒತ್ತಡ ಹಾಕಲು ಎಲ್ಲ ಎಂಇಎಸ್ ನಾಯಕರು ಒಗ್ಗಟ್ಟು ಪ್ರದಶ೯ನ ಮಾಡಬೇಕಾಗಿದೆ ಎಂದರು.

Advertisement


Spread the love

About Laxminews 24x7

Check Also

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

Spread the loveಮಂಗಳೂರು, ಫೆಬ್ರವರಿ 26: ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ (Missing Case) ಇದೀಗ ಹಲವು ಅನುಮಾನಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ