Breaking News

“ಗಡಿ ಭಾಗದ ರಸ್ತೆ ಸಂಪರ್ಕಗಳು ಬಂದ್: ಮತ್ತಷ್ಟು ಬಿಗಿಯಾದ ಲಾಕ್ ಡೌನ್

Spread the love

“ಗಡಿ ಭಾಗದ ರಸ್ತೆ ಸಂಪರ್ಕಗಳು ಬಂದ್: ಮತ್ತಷ್ಟು ಬಿಗಿಯಾದ ಲಾಕ್ ಡೌನ್”

ಚಡಚಣ: ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಡಿ ರಸ್ತೆಗಳ ಮೇಲೆ ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಲಾಗಿದೆ…

ದೇವರ ನಿಂಬರಗಿ ಗ್ರಾ.ಪಂ ಅಧ್ಯಕ್ಷ ಸದಾಶಿವ ಶಿಂಘೆ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದ ಸುಸಲಾದ, ಉಮದಿ, ಸೊನ್ನಲಗಿ ಸೇರಿದಂತೆ ಊರುಗಳಿಗೆ ಸಂಪರ್ಕ ನೀಡುವ ಎಲ್ಲ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿ ಯಾವುದೇ ವಾಹನಗಳಾಗಲಿ, ಜನರಾಗಲಿ ಸಂಚರಿಸದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ…

ಗ್ರಾಮದಲ್ಲಿ ಅಗತ್ಯ ವಸ್ತುಗಳು ಹಾಗೂ ದಿನಸಿ ಕೊಳ್ಳಲು ಮಾತ್ರ ಮನೆಯಿಂದ ಒಬ್ಬ ವ್ಯಕ್ತಿಯಂತೆ ಹೊರ ಬರಬಹುದು. ಜನರು ಯಾವುದೇ ಕಾರಣಕ್ಕೂ ಗುಂಪು-ಗುಂಪಾಗಿ ಓಡಾಡದಂತೆ ನಿರ್ಬಂಧ ಹೇರಿದ್ದಾರೆ…

ಕೋವಿಡ್-19 ವೈರಸ್ ನಿಂದ ನಿಮ್ಮ ಕುಟುಂಬ ರಕ್ಷಣೆ ನಿಮ್ಮ ಕೈಯಲ್ಲಿದೆ. ಯಾರು ದಯವಿಟ್ಟು ಮನೆಗಳಿಂದ ಸುಖಾಸುಮ್ಮನೆ ಹೊರ ಬರಬೇಡಿ…

ಸರ್ಕಾರದ ಲಾಕ್ ಡೌನ್ ನಿಯಮ ಕಟ್ಟು ನಿಟ್ಟಾಗಿ ಪಾಲಿಸಿ, ನಿಯಮ ಉಲ್ಲಂಘಿಸಿ ಓಡಾಟ ಹಾಗೂ ಬೈಕ್ ಸಂಚಾರ ನಡೆಸಿದರೆ ಸೀಜ್ ಮಾಡಿ ಕೇಸ್ ಮಾಡಲಾಗುವದು ಎಂದು ಮಾಹಿತಿ ತಿಳಿಸಿದರು…


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ