ಹಾಸನ: ದಬ್ಬಾಳಿಕೆ ಮಾಡಲಿ ಯಾವ ರೀತಿ ರಿಪೇರಿ ಮಾಡಬೇಕು ಗೊತ್ತಿದೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಗ್ರಾಮ ಪಂಚಾಯ್ತಿ ಚುನಾವಣೆಗೆ ಮೀಸಲು ನಿಗದಿ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಡಿಸಿಯವರು ಮೀಸಲು ನಿಗದಿ ಸಂಬಂಧ ಯಾಕೆ ತಹಸೀಲ್ದಾರ್‌ಗೆ ಪತ್ರ ಬರೆದರು? ಅವರಿಂದ ವರದಿ ಪಡೆದ ಬಳಿಕ ಮೀಸಲು ನಿಗದಿ ಬದಲಾವಣೆ ಮಾಡಿದ್ದು ಯಾಕೆ? ಹಾಗೇ ಬದಲಾವಣೆ ಮಾಡುವಾಗ ನಿರ್ದಿಷ್ಟ ಕಾರಣ ನೀಡಿ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ಜಿಲ್ಲೆಯಲ್ಲಿ ಎಡಿಸಿಯಾಗಿ ಯಾರು ಇರುತ್ತಿಲ್ಲ. ಡಿಸಿ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಒಬ್ಬೊಬ್ಬರಾಗಿ ವರ್ಗಾವಣೆ ಮಾಡಿಸಿಕೊಂಡು ಹೋಗ್ತಾ ಇದ್ದಾರೆ. ಮೀಸಲು ನಿಗದಿಯಾಗಿರುವ ದೃಢೀಕೃತ ಪ್ರತಿ ಕೇಳಿದರೆ ಇನ್ನೂ ಕೊಡ್ತಾ ಇಲ್ಲ. ರೈತರಿಗೆ ತೊಂದರೆ ಕೊಡಲು ನಾನು ಬಿಡಲ್ಲ. ನಾನು ಡಿಸಿ ಆಫೀಸ್‌ಗೆ ಹೋಗಿದ್ನೋ ಇಲ್ಲವೋ ಅನ್ನೋದನ್ನ ಹೇಳಿಲಿ. ಸೋಮವಾರದ (ಆ.31) ಒಳಗೆ ಮೀಸಲು ಬದಲಾವಣೆ ಆಗದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ 7.35 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಇದೆ. 14 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಬಿತ್ತಿದ ಬೆಳೆ ಬಹುತೇಕ ನಾಶವಾಗಿದೆ. ರಾಗಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬೇಲೂರು, ಆಲೂರು ತಾಲೂಕುಗಳನ್ನು ಬರ ಪಟ್ಟಿಗೆ ಯಾಕೆ ಸೇರಿಸಿಲ್ಲ. ರೇವಣ್ಣ, ಮಂಜಣ್ಣ ಗಲಾಟೆ ಮಾಡ್ತಾರೆ ಅಂತ ನಮ್ಮ ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎನ್ನುವಂತಾಗಿದೆ. ಈ ಎಡಿಸಿಯನ್ನು ಎಲ್ಲಿಂದ ಹಿಡಿದುಕೊಂಡು ಬಂದರೋ. ನಾನು ಹಳ್ಳಿ ಭಾಷೆಯಲ್ಲಿ ಹೇಳಿದ್ರೆ ಅವರು ಬೈತಾರೆ ಎಂದರು.
Laxmi News 24×7