ನವದೆಹಲಿ: ಕೊರೊನಾ ವಿರುದ್ಧ ಹಗಲು-ರಾತ್ರಿ ಎನ್ನದೇ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ದೇಶಾದ್ಯಂತ ಸೇನೆಯಿಂದ ಗೌವರ ಸಲ್ಲಿಸಲಾಗುತ್ತಿದೆ.
ಬೆಂಗಳೂರು, ಗೋವಾ, ಕೇರಳ, ಹರ್ಯಾಣ, ಪಂಜಾಬ್, ನವದೆಹಲಿ ರಾಜ್ ಪಥ, ಲೇ ಲಡಾಕ್ ಸೇರಿದಂತೆ ದೇಶಾದ್ಯಂತ ಭೂಸೇನೆ, ನೌಕಾ ಸೇನೆ, ವಾಯುಸೇನೆಯಿಂದ ದಣಿವರಿಯದೇ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಗೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಗರೆದು ಗೌರವ ವಂದನೆ ಸಲ್ಲಿಸಲಾಯಿತು.
ದೇಶಾದ್ಯಾಂತ ಇರುವ ಕೊವಿಡ್-19 ಆಸ್ಪತ್ರೆಗಳ ಮೇಲೆ ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸಲ್ಲಿಸಿತು. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲಾಯಿತು.