ಚಿಕ್ಕೋಡಿ: ಅಂಕಲಿ ಯಿಂದ ಚಿಕ್ಕೋಡಿಯ ಸಾರ್ವಜನಿಕ ತಾಲೂಕ ಆಸ್ಪತ್ರೆಗೆ ರೋಗಿಯನ್ನು
ಸಾಗಿಸುತ್ತಿದ ಆಂಬ್ಯುಲೆನ್ಸ್ ವಾಹನ ಕೇರೂರ ಕ್ರಾಸ್ ಬಳಿ ಪಂಚರ ಆಗಿ ನಿಂತಿದ್ದು ಅದನ್ನು ಗಮನಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕೋಡಿ ತಾಲೂಕ ಅಧ್ಯಕ್ಷರಾದ ಶ್ರೀ ಮಂಜುನಾಥ್ ಪರಗೌಡ್ರು ತಕ್ಷಣ ಅಲ್ಲಿಗೆ
ಹೋಗಿ ಅಂಬುಲೆನ್ಸ್ ಚಾಲಕರ ಪರಿಸ್ಥಿತಿಯನ್ನು ಗಮನಿಸಿ ಯಾಕೆಂದರೆ ಅಲ್ಲಿ ಪಕ್ಕದಲ್ಲೆಲ್ಲೋ ಪಂಚರ ತೆಗೆಯುವ ಅಂಗಡಿ ಇಲ್ಲದ ಕಾರಣ ಬೇರೆ ಅಂಬುಲೆನ್ಸ್ ಅನ್ನು ಕರೆಸಿ ರೋಗಿಯನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಪಂಚರ ಅಂಗಡಿ
ಅವನನ್ನು ಕರೆದುಕೊಂಡು ಬಂದು ಪಂಚರ್ ತೆಗೆಸಿ ಈ ವಾಹನವನ್ನು ಕಳಿಸಲಾಯಿತು.