Breaking News

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಮೇಲೆಯೂ ನಮಗೆ ನಂಬಿಕೆ ಹೋಗಿದೆ. ಹಳೆಯ ಪ್ಯಾಕೇಜ್​ನ ಪರಿಹಾರ ಧನವನ್ನ ಸರಿಯಾಗಿ ನೀಡಿದ್ರೆ ಮಾತ್ರ ಈ ಪ್ಯಾಕೇಜ್​ನ್ನು ನಂಬಬಹುದು: ಸತೀಶ್​ ಜಾರಕಿಹೊಳಿ

Spread the love

ರಾಜ್ಯ ಸರ್ಕಾರ ಘೋಷಣೆ ಮಾಡಿದ ಕೊರೊನಾ ವಿಶೇಷ ಪ್ಯಾಕೇಜ್​​ಗೆ ವಿರೋಧ ಪಕ್ಷದ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಅಸಮಾಧಾನ ಹೊರಹಾಕ್ತಿದ್ದಾರೆ. ಇದೀಗ ಈ ಸಾಲಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಸಹ ಸೇರಿದ್ದು ಇದು ವಿಪಕ್ಷಗಳ ಒತ್ತಡಕ್ಕೆ ಮಣಿದು ಕಾಟಾಚರಕ್ಕೆ ತಂದ ಪ್ಯಾಕೇಜ್​ ಆಗಿದೆ ಎಂದು ವ್ಯಂಗ್ಯವಾಡಿದ್ರು.

ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮೊದಲು ನೀವು ನಿಮ್ಮ ಹಳೆಯ ಪ್ಯಾಕೇಜ್​ನ ಲೆಕ್ಕಾಚಾರವನ್ನ ಕೊಡಿ. ಕಳೆದ ಬಾರಿ ನೀವು ಆಟೋ ಡ್ರೈವರ್​ಗೆ ಹಣ ಕೊಡುತ್ತೇನೆ ಎಂದು ಹೇಳಿದ್ರಿ. ಆದರು ಎಷ್ಟು ಜನಕ್ಕೆ ನಿಮ್ಮ ಪರಿಹಾರ ಧನ ಬಂದು ತಲುಪಿದೆ..? ಇಂತಹ ಸುಳ್ಳು ಪ್ಯಾಕೇಜ್​ಗಳನ್ನ ನಾವು ತುಂಬಾ ಕಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಮೇಲೆಯೂ ನಮಗೆ ನಂಬಿಕೆ ಹೋಗಿದೆ. ಹಳೆಯ ಪ್ಯಾಕೇಜ್​ನ ಪರಿಹಾರ ಧನವನ್ನ ಸರಿಯಾಗಿ ನೀಡಿದ್ರೆ ಮಾತ್ರ ಈ ಪ್ಯಾಕೇಜ್​ನ್ನು ನಂಬಬಹುದು ಎಂದು ಎಂದು ಹೇಳಿದ್ರು.

ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೆ 4000 ರೂಪಾಯಿ ಘೋಷಣೆ ಮಾಡಲಾಗಿದೆ. ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಚಿಕಿತ್ಸೆ ಉಚಿತವಾಗಿ ಸಿಗ್ತಿದೆ. ನಮ್ಮ ರಾಜ್ಯಗಳಲ್ಲೂ ಇಂತಹ ಸೌಲಭ್ಯದ ಅವಶ್ಯಕತೆ ಇದೆ. ರಾಜ್ಯದಲ್ಲಿ ಕೋವಿಡ್​ ಸೋಂಕು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದೆ. ಆದರೆ ಸರ್ಕಾರ ಮಾತ್ರ ಬೆಂಗಳೂರಿಗೆ ಮಾತ್ರ ಸೀಮಿತ ಎಂಬಂತೆ ವರ್ತಿಸುತ್ತಿದೆ ಎಂದು ಗುಡುಗಿದ್ರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ