Breaking News

ಗೋವಿಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಲು ಆಗ್ರಹ

Spread the love

ಬೆಳಗಾವಿ : ಸಂರಕ್ಷಣೆ ದೃಷ್ಟಿಯಿಂದ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗೋಮಾತೆ ಗೌರವದ ಅಭಿಮಾನದ ಪ್ರಯುಕ್ತ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಒಟ್ಟು 1.80 ಲಕ್ಷ ಸಹಿ ಸಂಗ್ರಹ ಪೂರ್ಣಗೊಳಿಸಲಾಗಿದೆ. ಈ ಸಹಿಗಳ ಒಂದು ಪ್ರತಿಯನ್ನು ಸೋಮವಾರ ಸಾಂಕೇತಿಕವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ಚನ್ನಮ್ಮ ವೃತ್ತದಿಂದ ಗೋವಿನ ಸಮೇತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಗೋ ಪ್ರೇಮಿಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಖು. ರಾಜ್ಯದಲ್ಲೂ ಗೋ ಸಂರಕ್ಷಣೆಗೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸವದತ್ತಿ ತಾಲೂಕು ಶಿಂದೋಗಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಈಗಾಗಲೇ ಒಂದು ಹಂತದ ಅಭಿಯಾನ ಪೂರ್ಣಗೊಂಡಿದೆ. ಈಗ ದೇಶವ್ಯಾಪ್ತಿಯಲ್ಲಿ ಎರಡನೇ ಹಂತದ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಇದಕ್ಕೆ ಬೆಂಬಲಾರ್ಥವಾಗಿ ಕೆಲವೇ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 1.80 ಲಕ್ಷ ಸಹಿ ಸಂಗ್ರಹ ಆಗಿದೆ. ಗೋ ಮಾತೆ ಅತ್ಯಂತ್ಯ ಶ್ರೇಷ್ಠ. ಗೋವು ಉಳಿದರೆ ಮಾತ್ರ ಮನಕುಲ ಉಳಿಯುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ, ರಾಷ್ಟ್ರಮಾತೆ ಎಂದು ಘೋಷಿಸಿ, ಸಂರಕ್ಷಿಸಬೇಕು. ಮೂರನೇ ಹಂತವಾಗಿ 2027ರ ಆಗಸ್ಟ್‌ನಲ್ಲಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ. ಸರ್ಕಾರ ಇದಕ್ಕೆ ಆಸ್ಪದ ಕೊಡದೇ ಈಗಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ನಿಲೇಶ, ಮಾರುತಿ ಕೋಳಿ, ಆನಂದ ನವಲೆ, ಆನಂದ ಶೆಟ್ಟಿ, ಸುರೇಂದ್ರ ಭಂಡಾರಿ, ಪ್ರಕಾಶ ಲಾಡವ್, ಸೂರಜ್, ಮುಕುಂದ ಅರುಣಕುಮಾರ, ಜಯಶಂಕರ ವಣ್ಣೂರ, ರಾಜು ಬಾದಾಮಿ, ಚಿದಂಬರ ಕನಕಗಿರಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದ್ದರು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ