Breaking News

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿದ್ದ ರಾಜಕೀಯ, ಡಿಕೆಶಿ ಸಿಎಂ ಆದ ಬಳಿಕ ಕಲುಷಿತವೇ? – ಶ್ರೀರಾಮುಲು

Spread the love

ಚಿತ್ರದುರ್ಗ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ದವಿದ್ದ ರಾಜಕೀಯ ಡಿಕೆ ಶಿವಕುಮಾರ್  ಸಿಎಂ ಆದ ಬಳಿಕ ಕಲುಷಿತಗೊಂಡಿದೆಯೇ? ಎಂದು ಮಾಜಿ ಸಚಿವ ಬಿ ಶ್ರೀರಾಮುಲು  ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಚಿತ್ರದುರ್ಗ  ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಎಸ್ ಟಿಸಮುದಾಯದ ಜಾಗೃತಿ ಸಮಾವೇಶಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಕಲುಷಿತ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2028ಕ್ಕೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸಹ ಹೇಳಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಶುದ್ಧವಿತ್ತಾ? ಡಿಕೆಶಿ ಸಿಎಂ ಆದ ಬಳಿಕ ರಾಜಕೀಯ ಕಲುಷಿತ ಆಯಿತಾ? ಅಂದಮೇಲೆ ಡಿಕೆ ಶಿವಕುಮಾರ್ ಆಡಳಿತ ಸರಿಯಿಲ್ಲ ಎಂದು ಹೇಳಿದಂತಾಗುತ್ತದೆ ಎಂದು ತಿರುಗೇಟು ನೀಡಿದರು.

ಇನ್ನು ಎಲ್ಲೆಡೆ ಬರ ತಾಂಡವವಾಡುತ್ತಿದೆ. ಆದರೆ ಬರಗಾಲ ವೇಳೆ ಯಾವನಾದ್ರೂ ಜಿಲ್ಲೆಯಲ್ಲಿದ್ದಾರೆಯೇ? ಎಂದು ಏಕವಚನದಲ್ಲಿ ಜನಪ್ರತಿನಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರಲ್ಲಿ ದೇವರ ಎತ್ತುಗಳಿವೆ. ನೀರು ಮೇವಿಲ್ಲದೆ ದೇವರ ಎತ್ತುಗಳು ಸಾಯುತ್ತಿವೆ. ಬರಗಾಲದಿಂದ ಬೇಸತ್ತ ಜನರು ಗುಳೆ ಹೋಗುತ್ತಿದ್ದಾರೆ. ಆದರೆ ಸಿಎಂ ಡಿಕೆಶಿ ಮಾತ್ರ ದೆಹಲಿ ಹಾಗೂ ಬೆಂಗಳೂರಲ್ಲಿ ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವಲ್ಲಿ ವ್ಯತ್ಯಯವಾಗ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆಗೆ ಕೊಡಲು ಹಣವಿದೆ. ಆದರೆ ಶಾಲಾ ಮಕ್ಕಳಿಗೆ ಮೊಟ್ಟೆ, ಬುಕ್, ಬ್ಯಾಗ್ ಹಾಗೂ ಸಾಕ್ಸ್ ಕೊಡಲು ಇವರಿಗೆ ಹಣ ಇಲ್ಲ. ಪ್ರವಾಸಿ ಮಂದಿರಗಳ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ. ಜೊತೆಗೆ ಹಗರಣಗಳ ಸರಮಾಲೆ ಈ ಸರ್ಕಾರದ ಹೆಗಲಿಗಿದ್ದು, ಕೆಪಿಎಸ್ಸಿ, ಅಷ್ಟೇ ಅಲ್ಲ, ಎಸ್ಸಿ, ಎಸ್ಟಿ ನಿಗಮಗಳಲ್ಲೂ ಹಗರಣ ಮಾಡಿದ್ದು, ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ಕುಳಿತಿದ್ದಾರೆಂದು ಕಿಡಿಕಾರಿದರು.

ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಬಿಜೆಪಿ ಕಾಲದಲ್ಲಿ ಶೇ.7 ಮೀಸಲಾತಿ ನೀಡಿದ್ದೆವು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಶೇ.3ಕ್ಕೆ ಇಳಿಸಿದೆ ಎಂದು ಹರಿಹಾಯ್ದರು.


Spread the love

About Laxminews 24x7

Check Also

ಕೆಪಿಎಸ್‍ಸಿ ಹಗರಣದ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

Spread the loveಬೆಂಗಳೂರು: ಕೆಪಿಎಸ್‍ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ.ವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳಿದ್ದು, ಸಿಬಿಐ (CBI) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ