Breaking News

ನನ್ನ ಹೆಂಡತಿಗೆ ವೆಂಟಿಲೇಟರ್​ ಕೊಡಿಸೋಕೆ ಆಗ್ತಿಲ್ಲ- ಮೈಸೂರು ಡಿಹೆಚ್​ಓ

Spread the love

ಮೈಸೂರು: ಕೊರೊನಾ ಸೋಂಕಿತರಿಗೆ ಬೆಡ್ ಹಂಚಿಕೆ ವಿಚಾರದಲ್ಲಿ​ ಮೈಸೂರು ಡಿಹೆಚ್​ಓ ಅಸಹಾಯಕರಾಗಿ ಮಾತನಾಡಿರುವ ಆಡಿಯೋ ವೈರಲ್​ ಆಗಿದೆ.

ಕೊರೊನಾ ಸೋಂಕಿತರ ಸಂಬಂಧಿಕರೊಡನೆ ಮಾತನಾಡಿರುವ ಮೈಸೂರು ಡಿಹೆಚ್​ಓ, ನನ್ನ ಕೈ ಸೋತೋಗಿದೆ. ನನ್ನ ಹೆಂಡತಿಗೆ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ. ನೀವು ಯಾರಿಗೆ ಬೇಕಾದ್ರು ಕಂಪ್ಲೇಂಟ್ ಕೊಡಿ‌. ಇವತ್ತೇ ಮನೆಗೆ ಕಳುಹಿಸಿದರು ನಾನು ಹೋಗಲು ರೆಡಿ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ನನ್ನಿಂದ ವೆಂಟಿಲೇಟರ್ ಅರೆಂಜ್ ಮಾಡಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವತಃ ನಾನು ಇಎಸ್‌ಐ ಆಸ್ಪತ್ರೆಯಲ್ಲಿ ಬೆಡ್ ಅರೆಂಜ್ ಮಾಡೋಕೆ ಬೇಕಾದಷ್ಟು ಕಷ್ಟಪಟ್ಟಿದ್ದೇನೆ. ಆ ಕಷ್ಟ ನಿಮಗೆ ಗೊತ್ತಿಲ್ಲ. ನಮ್ಮ ಕೈನಲ್ಲಿ ಏನು ಇಲ್ಲ. ವೆಂಟಿಲೇಟರ್ ಎಲ್ಲಿದೆ ಎಂದು ನನಗೇನು ಗೊತ್ತು..? ವಾರ್ ರೂಂ ಅವರಿಗೆ ಗೊತ್ತಿರುತ್ತೆ ಎಂದು ಬಹಳ ಅಸಹಾಯಕ ಧ್ವನಿಯಲ್ಲಿ ತಮ್ಮ ನೋವು ಹೇಳಿಕೊಂಡಿದ್ದಾರೆ.

ಕೊರೊನಾ ನಿಯಂತ್ರಣದಲ್ಲಿ ಹರಗಲಿರುಳು ದುಡಿಯುತ್ತಿರುವ ಅಧಿಕಾರಿಗಳು ಇಷ್ಟೊಂದು ಅಸಹಾಯಕರಾಗಿ ಮಾತನಾಡಿದ್ದಾರೆ ಎಂದರೆ, ಜನ ಸಾಮನ್ಯರ ಪಾಡೇನು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ