Breaking News
Home / ರಾಜ್ಯ / ವಿಶ್ವದ ಶ್ರೀಮಂತ ದಂಪತಿ ಡಿವೋರ್ಸ್​: 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಬಿಲ್​ ಗೇಟ್ಸ್​!

ವಿಶ್ವದ ಶ್ರೀಮಂತ ದಂಪತಿ ಡಿವೋರ್ಸ್​: 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಬಿಲ್​ ಗೇಟ್ಸ್​!

Spread the love

ವಾಷಿಂಗ್ಟನ್​: ಟೆಕ್​ ದೈತ್ಯ ಕಂಪನಿ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ ಮತ್ತು ಪತ್ನಿ ಮೆಲಿಂಡಾ ಗೇಟ್ಸ್​ ಡಿವೋರ್ಸ್​ ಪಡೆದುಕೊಂಡಿರುವುದಾಗಿ ಸೋಮವಾರ ಘೋಷಿಸಿದ್ದು, 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.

ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ ವಿಶ್ವದ ಶ್ರೀಮಂತ ದಂಪತಿಗಳಲ್ಲಿ ಒಬ್ಬರಾಗಿದ್ದರು. ಇಬ್ಬರ ಆಸ್ತಿ ಮೌಲ್ಯ 130 ಬಿಲಿಯನ್​ ಡಾಲರ್​ ಎಂದು ಅಂದಾಜಿಸಲಾಗಿದೆ. ಗೇಟ್ಸ್​ ಪರೋಪಕಾರಿ ಗುಣವುಳ್ಳ ವ್ಯಕ್ತಿಯಾಗಿದ್ದು, ತಮ್ಮ ಭಾರಿ ಪ್ರಭಾವಶಾಲಿ ಅಡಿಪಾಯದ ಮೂಲಕ ವಿಶ್ವದಾದ್ಯಂತ ಶತಕೋಟಿ ಹಣವನ್ನು ದತ್ತಿ ಕಾರ್ಯಗಳಿಗೆ ನೀಡಿದ್ದಾರೆ.

ಡಿವೋರ್ಸ್​ ವಿಚಾರವನ್ನು ತಮ್ಮ ಟ್ವಿಟರ್​ ಮೂಲಕ ಬಿಲ್​ ಗೇಟ್ಸ್​ ತಿಳಿಸಿದ್ದಾರೆ. ಜಾಗತಿಕವಾಗಿ ಆರೋಗ್ಯ, ಲಿಂಗ ಸಮಾನತೆ, ಶಿಕ್ಷಣ ಮತ್ತು ಇತರೆ ಉದ್ದೇಶಿತ ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಬಿಲ್​ ಮತ್ತು ಮೆಲಿಂಡಾ ಗೇಟ್ಸ್​ ಫೌಂಡೇಶನ್​ ಜಂಟಿ ಕಾರ್ಯವನ್ನು ನಾವು ಮುಂದುವರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ನಮ್ಮ ಸಂಬಂಧದ ಬಗ್ಗೆ ಹೆಚ್ಚಿನ ಚಿಂತನೆ ನಂತರ ನಾವು ನಮ್ಮ ಮದುವೆ ಬಂಧವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಅವರು ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ, ತಮ್ಮ ಜಂಟಿ ಹೇಳಿಕೆಯ ಪ್ರತಿಯೊಂದನ್ನು ಅಧಿಕೃತ ಟ್ವಿಟರ್​ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ 27 ವರ್ಷಗಳಲ್ಲಿ ಮೂವರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ಜನರಿಗೆ ಆರೋಗ್ಯ ಮತ್ತು ಸುಧಾರಿತ ಜೀವನಕ್ಕೆ ನೆರವಾಗಲು ಜಾಗತಿಕವಾಗಿ ಕೆಲಸ ಮಾಡುವಂತಹ ಫೌಂಡೇಶನ್​ ಅನ್ನು ನಿರ್ಮಿಸಿದ್ದೇವೆ. ನಮ್ಮ ಡಿವೋರ್ಸ್​ ಹೊರತಾಗಿ ಈ ಜಂಟಿ ಕಾರ್ಯ ಹೀಗೆ ಮುಂದುವರಿಯಲಿದೆ. ನಾವು ಒಟ್ಟಿಗೆ ಕೆಲಸ ಮಾಡಲಿದ್ದೇವೆ. ಆದರೆ, ನಮ್ಮ ಜೀವನದ ಈ ಮುಂದಿನ ಹಂತದಲ್ಲಿ ನಾವು ದಂಪತಿಯಾಗಿ ಇರುವುದಿಲ್ಲ ಎಂದಿದ್ದಾರೆ.

ಗೇಟ್ಸ್​ ದಂಪತಿ ಡಿವೋರ್ಸ್​ ಪಡೆದುಕೊಂಡಿರುವ ಬಗ್ಗೆ ಮಾತ್ರ ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ಇಬ್ಬರ ನಡುವಿನ ಹಣ ಹಂಚಿಕೆ ಕುರಿತು ಯಾವುದೇ ಪ್ರಸ್ತಾಪವಿಲ್ಲ.

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಪತ್ನಿ ಮ್ಯಾಕೆಂಜಿ ಡಿವೋರ್ಸ್​ ಪಡೆದ ಎರಡು ವರ್ಷಗಳ ನಂತರ ಗೇಟ್ಸ್​ ದಂಪತಿಯ ಈ ಪ್ರಕಟಣೆ ಬಂದಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ